ತಿರುಪತಿ - ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 6ರಂದು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಜಯ ದಶಮಿಯಂದು ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾಧಿಗಳು ಭಕ್ತಿ ಸಮರ್ಪಿಸಿದರು.
ತಿರುಪತಿ - ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 6ರಂದು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಜಯ ದಶಮಿಯಂದು ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾಧಿಗಳು ಭಕ್ತಿ ಸಮರ್ಪಿಸಿದರು.
ತಿರುಪತಿಯಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 6ರಂದು ಶ್ರೀ ವೆಂಕಟೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ತತ್ವಜ್ಞಾನದ ಪ್ರಕಾರ ಜೀವವನ್ನು ರಥಕ್ಕೆ ಹಾಗೂ ಸಾರಥಿಯನ್ನು ಪರಮಾತ್ಮನಿಗೆ ಹೋಲಿಸಲಾಗುತ್ತದೆ.
ತಿರುಪತಿ- ತಿರುಮಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 5 ರಂದು ಸೂರ್ಯಪ್ರಭ (ಸೂರ್ಯ ರಥ) ವಾಹನ ಉತ್ಸವ ನಡೆಯಿತು. ಅದಿತಿಯ ಪುತ್ರ ಹಾಗೂ ಮಹಾ ವಿಷ್ಣುವಿನ ಪುತ್ರ ಸೂರ್ಯ ನಾರಾಯಣನ ಸಂಕೇತವಾಗಿ ಸೂರ್ಯಪ್ರಭ ವಾಹನ ಉತ್ಸವ ನಡೆಸಲಾಗುತ್ತದೆ. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ತಿರುಪತಿ- ತಿರುಮಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 5 ರಂದು ಸೂರ್ಯಪ್ರಭ ವಾಹನ ಉತ್ಸವ ನಡೆಯಿತು. ಜಗತ್ತಿನ ನಿಯಾಮಕನಾದ ಪರಮಾತ್ಮ (ವಿಷ್ಣು) ಜಗವನ್ನು ಬೆಳಗುತ್ತಿರುವ ಸಂಕೇತವಾಗಿ ಸೂರ್ಯಪ್ರಭ ವಾಹನ ಉತ್ಸವ ನಡೆಸಲಾಗುತ್ತದೆ.
ತಿರುಪತಿ -ತಿರುಮಲದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ನಡೆದ ಸೂರ್ಯಪ್ರಭ ವಾಹನ ಉತ್ಸವದಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳು ದೇವರ ವ ೇ ಷ ಧರಿಸಿ ಸಂಭ್ರಮಿಸಿದರು.
ತಿರುಪತಿ- ತಿರುಮಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 5 ರಂದು ರಾತ್ರಿ ಉಂಜಲ ಸೇವಾದ ನಂತರ ಚಂದ್ರಪ್ರಭ ವಾಹನ ಉತ್ಸವ ನಡೆಯಿತು. ಉತ್ಸವದ ಅಂಗವಾಗಿ ತಿರುಮಲದ ಎಲ್ಲ ಬೀದಿಗಳಲ್ಲೂ ದೀಪಾಲಂಕಾರ ಮಾಡಲಾಗಿತ್ತು.
ತಿರುಪತಿ- ತಿರುಮಲದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಚಂದ್ರಪ್ರಭ ವಾಹನ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಚಂದ್ರನು ಮನೋ ನಿಯಾಮಕನಾಗಿರುವುದರಿಂದ ಹಾಗೂ ಔಷಧದ ಅಧಿ ದೇವತೆಯಾಗಿರುವ ಹಿನ್ನೆಲೆಯಲ್ಲಿ ಚಂದ್ರ ಪ್ರಭ ವಾಹನ ಉತ್ಸವ ಮಹತ್ವ ಪಡೆದಿದೆ.