ತಿರುಪತಿ- ತಿರುಮಲದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 2ರ ಸಂಜೆ ಸರ್ವ ಭೂಪಾಲ ಉತ್ಸವ ನಡೆಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಭಕ್ತಿ ಸಮರ್ಪಿಸಿದರು. ಶ್ರೀ ವೆಂಕಟೇಶ್ವರ ಸ್ವಾಮಿ ಇಡೀ ವಿಶ್ವದ ಅಧಿಪತಿಯಾಗಿರುವ ಪ್ರತೀಕವಾಗಿ ಹಾಗೂ ಕಾಲ ಕಾಲಕ್ಕೆ ಮಳೆ, ಬೆಳೆ ಯಾಗುತ್ತಿರುವುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ವಾಹನದ ಉತ್ಸವ ನಡೆಸಲಾಗುತ್ತದೆ.
ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 1ರಂದು ಸಿಂಹ ವಾಹನ ಉತ್ಸವ ನಡೆಯಿತು. ಸಾವಿರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಸರ್ವ ಶಕ್ತನಾದ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರತೀಕವಾಗಿ ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದ ಸಿಂಹ ವಾಹನ ಉತ್ಸವವನ್ನು ನಡೆಸಲಾಗುತ್ತದೆ.