Select Your Language

Notifications

webdunia
webdunia
webdunia
webdunia

ಮುನಿಸಿಕೊಂಡ ಸುದೀಪ್ : ಬಿಗ್ ಬಾಸ್ ಕನ್ನಡ ಹೋಸ್ಟ್ ಮಾಡಲ್ಲ!

ಮುನಿಸಿಕೊಂಡ ಸುದೀಪ್ : ಬಿಗ್ ಬಾಸ್ ಕನ್ನಡ ಹೋಸ್ಟ್ ಮಾಡಲ್ಲ!
Bangalore , ಬುಧವಾರ, 16 ನವೆಂಬರ್ 2016 (10:33 IST)
ಬೆಂಗಳೂರು: ಬಿಗ್ ಬಾಸ್ ಮೇಲೆ ಸುದೀಪ್  ಮುನಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಬಂದಿದ್ದ ಹುಚ್ಚ ವೆಂಕಟ್ ಸ್ಪರ್ಧಿ ಪ್ರಥಮ್ ಗೆ ಹೊಡೆದಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದುವೇ ಸುದೀಪ್ ಮುನಿಸಿಗೆ ಕಾರಣವಾಗಿದೆ.

ಈ ಎಪಿಸೋಡ್ ನಿನ್ನೆ ಪ್ರಸಾರವಾಗಿದ್ದು, ಇದನ್ನು ವೀಕ್ಷಿಸಿದ ಸುದೀಪ್ ಇದರಲ್ಲಿ ಹುಚ್ಚ ವೆಂಕಟ್ ರದ್ದು ತಪ್ಪಿದೆ. ಅವರು ಸ್ಪರ್ಧಿಯ ಮೇಲೆ ಕೈ ಮಾಡಿದ್ದು ಸರಿಯಲ್ಲ. ಹೀಗಾಗಿ ಹುಚ್ಚ ವೆಂಕಟ್ ಗೆ ಶಿಕ್ಷೆಯಾಗುವವರೆಗೂ ತಾನು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಿಸಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಸುದೀಪ್ ಪ್ರಕಟಿಸಿದ್ದಾರೆ.

“ಈಗಷ್ಟೇ ಎಪಿಸೋಡ್ ನೋಡಿದೆ. ಆತ ಸೀದಾ ಮನೆಯೊಳಗೆ ಹೋಗಿ ಒಬ್ಬನಿಗೆ ಹೊಡೆದು ರಾಜಾರೋಷವಾಗಿ ಬರಬಹುದು ಎಂದುಕೊಂಡಿದ್ದರೆ ಅದು ಆತನ ತಪ್ಪು. ಆತನ ನಡೆ ಅಕ್ಷಮ್ಯ. ಹೀಗಾಗಿ ಆತನಿಗೆ ಶಿಕ್ಷೆಯಾಗುವವರೆಗೂ ನಾನು ಕಾರ್ಯಕ್ರಮ ನಿರೂಪಿಸುವುದಿಲ್ಲ. ಇದು ವೀಕ್ಷಕರಿಗೆ ನನ್ನ ಪ್ರಾಮಿಸ್” ಎಂದು ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ಯೂಬ್ ಲೈಟ್ ಸಲ್ಮಾನ್ ಖಾನ್ ಶಾರುಖ್ ಖಾನ್ ಜತೆಯಾಗಿ ನಟಿಸುತ್ತಿಲ್ಲ ಎಂದ ಕಬೀರ್ ಖಾನ್