Webdunia - Bharat's app for daily news and videos

Install App

ಸುವರ್ಣದಲ್ಲಿ ಶುರುವಾಗ್ತಿದೆ ’ಸೂಪರ್ ಜೋಡಿ’ ಸೀಸನ್ 2

Webdunia
ಸೋಮವಾರ, 28 ನವೆಂಬರ್ 2016 (14:16 IST)
ಸ್ಟಾರ್ ಸುವರ್ಣ ವಾಹಿನಿಯ ಯಶಸ್ವಿಯ ರಿಯಾಲಿಟಿ ಶೋದಲ್ಲಿ ’ಸೂಪರ್ ಜೋಡಿ’ ಕೂಡಾ ಒಂದು. ಸೀಜನ್ ಒಂದರಲ್ಲಿ ಕಿರುತೆರೆ, ಹಿರಿತೆರೆಯ 10 ಜೋಡಿಗಳು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿದ್ದರು. ಈಗ ಅದೇ  ಉತ್ಸಾಹದಿಂದ ಸೀಜನ್ 2 ನ್ನು ಪ್ರಾರಂಭಿಸಲು ಹೊರಟಿದೆ.
 
 ಈಗಾಗಲೇ ಈ ಶೋಗೆ ಸಂಬಂಧ ಪಟ್ಟ ಪ್ರೋಮೋ ವಾಹಿನಿಯಲ್ಲಿ ಬಿತ್ತರವಾಗುತ್ತಿದೆ. “ನಾವು ಎಂಥಾ ಸನ್ನಿವೇಷವನ್ನು ಎದುರಿಸುತ್ತೇವೆ, ಆದರೆ ಹೃದಯದಲ್ಲಿರುವವರು ಎದರು ಬಂದಾಗ ಆ ಕ್ಷಣ ಜೀವ ಝಲ್ ಎನ್ನುತ್ತದೆ” ಎಂಬ ಪ್ರೊಮೋದಲ್ಲೇ ಜೋಡಿಗಳ ಅನ್ಯೋನ್ಯತೆ, ಪ್ರೀತಿಯ ಬಗೆಗೆ ಹೇಳಲಾಗಿದೆ ಅನ್ನೋ ಸುಳಿವು ಸಿಗುತ್ತೆ. ಆದರೆ ಈ ಶೋನ ಜಯಮಾಲೆ ಧರಿಸಬೇಕಾದರೆ ದಿಲ್ ಜೊತೆ ಧಮ್ ಇರಬೇಕು. 
 
 ಅಸಲಿ ಜೋಡಿಗಳ ಬಾಂಧವ್ಯವನ್ನು ತೋರಿಸುವಂಥ ರಿಯಾಲಿಟಿ ಶೋ "ಸೂಪರ್ ಜೊಡಿ" ಕರ್ನಾಟಕದ ಹತ್ತು ಜನಪ್ರಿಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ ಜೋಡಿಯಾಗಲು ತಯಾರಿ ನಡೆಸಿದ್ದು, ಆಟವಾಡುತ್ತಾ ಹರಟೆ ಹೊಡೆಯುತ್ತಾ, ಕೊಟ್ಟಿರುವ ಟಾಸ್ಕ್‌ಗಳನ್ನು ಎದುರಿಸಲು ರೆಡಿಯಾಗಿದ್ದಾರೆ. 
 
ಈ ಸೀಸನ್ ನ ಟಾಸ್ಕಗಳು ಕಲ್ಪನೆಗೂ ಮೀರಿದ್ದು, ಒಟ್ಟಾರೆ ಅಭಿಮಾನಿಗಳಿಗೆ ಈ ಸಲ ಡಬ್ಬಲ್ ಧಮಾಕಾ ಜೊತೆಗೆ ಡಬ್ಬಲ್ ಥ್ರಿಲ್ ಗ್ಯಾರಂಟಿ ಎನ್ನುತ್ತಿದೆ ವಾಹಿನಿ. ಈಗಾಗಲೇ ಕರ್ನಾಟಕದ ಮನೆಮಾತಾಗಿರುವ ಅಕುಲ್ ಬಾಲಾಜಿ ಈ ಸೀಜನ್‍ ನಿರೂಪಕ. “ಸೂಪರ್ ಜೋಡಿ” ಈ ಸೀಜನ್‍ನಲ್ಲಿ ಯಾರು ಆ ಹತ್ತು ಜೋಡಿಗಳು? ಯಾವ ರೀತಿ ಈ ಜೋಡಿಗಳು ರಂಜಿಸುತ್ತಾರೆ ಎಂಬುದನ್ನು ಕಾದುನೋಡಬೆಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

ಮುಂದಿನ ಸುದ್ದಿ
Show comments