Publish Date: Fri, 12 May 2017 (09:46 IST)
Updated Date: Fri, 12 May 2017 (09:48 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವಣ್ಣ ತಮ್ಮ ಪುನೀತ್ ರಾಜ್ ಕುಮಾರ್ ಹಾದ ಹಿಡಿಯಲಿದ್ದಾರೆ. ಅಂದರೆ ಕಿರುತೆರೆಯಲ್ಲಿ ಧಾರವಾಹಿಯೊಂದನ್ನು ನಿರ್ಮಿಸಲಿದ್ದಾರೆ.
ಈಗಾಗಲೇ ಪುನೀತ್ ರಾಜ್ ಕುಮಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮನೆದೇವ್ರು ಧಾರವಾಹಿ ನಿರ್ಮಿಸುತ್ತಿದ್ದಾರೆ. ಅವರದೇ ಹಾದಿಯಲ್ಲಿ ಶಿವರಾಜ್ ಕುಮಾರ್ ಕೂಡಾ ಉದಯ ಟಿವಿಗಾಗಿ ತಮ್ಮ ಪ್ರೊಡಕ್ಷನ್ ನಲ್ಲಿ ಧಾರವಾಹಿ ನಿರ್ಮಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ಉದಯ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋಗೆ ಶಿವಣ್ಣ ತೀರ್ಪುಗಾರರಾಗಿ ಕೆಲಸ ಮಾಡಿದ್ದರು. ಇದೀಗ ಧಾರವಾಹಿ ನಿರ್ಮಿಸಲು ಮನಸ್ಸು ಮಾಡಿದ್ದಾರೆ. ಇತ್ತೀಚೆಗೆ ಹಿರಿತೆರೆಯ ಸ್ಟಾರ್ ಗಳು ಕಿರುತೆರೆಯತ್ತ ಆಕರ್ಷಿತರಾಗುತ್ತಿರುವುದಕ್ಕೆ ಇದೊಂದು ನಿದರ್ಶನ.
ಕಿಚ್ಚ ಸುದೀಪ್ ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ವಾರಸ್ದಾರ ಎನ್ನುವ ಧಾರವಾಹಿ ನಿರ್ಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಕಲರ್ಸ್ ವಾಹಿನಿಗಾಗಿ ಧಾರವಾಹಿ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಇದೀಗ ಶಿವಣ್ಣ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ