Webdunia - Bharat's app for daily news and videos

Install App

ನಟ ರಮೇಶ್ ಅರವಿಂದ್ ಗೆ ಸಿಕ್ತು ಪೆನ್ ಡ್ರೈವ್, ಬೆಚ್ಚಿಬಿದ್ದ ನಟ

Krishnaveni K
ಶನಿವಾರ, 25 ಮೇ 2024 (11:51 IST)
ಬೆಂಗಳೂರು: ರಾಜ್ಯದಾದ್ಯಂತ ಪೆನ್ ಡ್ರೈವ್ ಪ್ರಕರಣ ಸದ್ದು ಮಾಡುತ್ತಿರಬೇಕಾದರೆ ನಟ ರಮೇಶ್ ಅರವಿಂದ್ ಗೂ ಒಂದು ಪೆನ್ ಡ್ರೈವ್ ಸಿಕ್ಕಿದೆ. ಇದನ್ನು ನೋಡುತ್ತಿದ್ದಂತೇ ಅವರು ಬೆಚ್ಚಿಬಿದ್ದಿದ್ದಾರೆ.

ಇದು ನಡೆದಿರುವುದು ರಿಯಲ್ ಆಗಿ ಅಲ್ಲ. ಒಂದು ಶೋ ಪ್ರೋಮೋಗಾಗಿ ಮಾಡಿದ ಗಿಮಿಕ್. ಜೀ ಪಿಕ್ಚರ್ಸ್ ವಾಹಿನಿ ಪ್ರತಿಭಾವಂತ ನಿರ್ದೇಶಕರನ್ನು ಹುಡುಕುವ ನಿಟ್ಟಿನಿಂದ ಶಾರ್ಟ್ ಫಿಲಂ ಸ್ಪರ್ಧೆ ಏರ್ಪಡಿಸಿದೆ. ಈ ಸ್ಪರ್ಧೆ ಬಗ್ಗೆ ಪ್ರೋಮೋಗಾಗಿ ವಾಹಿನಿ ಪೆನ್ ಡ್ರೈವ್ ಗಿಮಿಕ್ ಮಾಡಿದೆ.

ರಮೇಶ್ ಅರವಿಂದ್ ಈ ಶಾರ್ಟ್ ಮೂವಿ ಸ್ಪರ್ಧೆ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಅವರು ಸ್ಟುಡಿಯೋಗೆ ತೆರಳಲು ರೆಡಿಯಾಗಿ ಬರುತ್ತಿರಬೇಕಾದರೆ ಒಬ್ಬ ಬಂದು ಸರ್ ನಿಮ್ಮನ್ನು ಒಬ್ಬರು ಭೇಟಿಯಾಗಿ ಏನೋ ಕೊಡಬೇಕು ಅಂತಿದ್ದಾರೆ ಎಂದಿದ್ದಾರೆ.

ಹೊರಗೆ ಬಂದು ನೋಡಿದರೆ ಒಬ್ಬಾತ ಪೆನ್ ಡ್ರೈವ್ ನೀಡುತ್ತಾನೆ. ಇದನ್ನು ನೋಡಿದ ತಕ್ಷಣ ರಮೇಶ್ ಅರವಿಂದ್ ಗಾಬರಿಯಾಗುತ್ತಾರೆ. ಇದೇನು ಎಂದು ಕೇಳುತ್ತಾರೆ. ಅದೇ ಸರ್ ಪೆನ್ ಡ್ರೈವ್ ಎನ್ನುತ್ತಾನೆ. ಏನು ಸಿನಿಮಾಗಾ? ಅದಕ್ಕೆ ಈ ಕೆಳಗೆ ಕಾಣುವ ಲಿಂಕ್ ಕ್ಲಿಕ್ ಮಾಡಿ ಅಪ್ ಲೋಡ್ ಮಾಡಿದ್ರೆ ಸಾಕಪ್ಪಾ. ಈ ಪೆನ್ ಡ್ರೈವ್ ಎಲ್ಲಾ ಮೊದಲು ಇಲ್ಲಿಂದ ತೆಗೆದುಕೊಂಡು ಹೋಗು ಎಂದು ಆರ್ಡರ್ ಮಾಡುತ್ತಾರೆ.

ಈ ಮೂಲಕ ಈಗ ಚಾಲ್ತಿಯಲ್ಲಿರುವ ಹಾಟ್ ಟಾಪಿಕ್ ಇಟ್ಟುಕೊಂಡು ಒಂದು ಶೋ ಬಗ್ಗೆ ಪ್ರೋಮೋ ಶೂಟ್ ಮಾಡಿದ್ದಾರೆ. ಈ ಪ್ರೋಮೋ ಪೆನ್ ಡ್ರೈವ್ ಕಾರಣಕ್ಕೇ ಈಗ ಎಲ್ಲರ ಗಮನ ಸೆಳೆಯುತ್ತಿದೆ ಎಂದರೆ ತಪ್ಪಾಗಲಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಮುಂದಿನ ಸುದ್ದಿ
Show comments