Webdunia - Bharat's app for daily news and videos

Install App

ಟಾರ್ಚ್ ಹಿಡ್ಕೊಂಡು ದಟ್ಟ ಕಾಡಲ್ಲಿ ಚಾರು: ಸಿಕ್ಕಾಪಟ್ಟೆ ಟ್ರೋಲ್ ಆದ ರಾಮಚಾರಿ ಸೀರಿಯಲ್

Krishnaveni K
ಬುಧವಾರ, 27 ಮಾರ್ಚ್ 2024 (09:49 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಅದಕ್ಕೆ ಕಾರಣ ಇದೀಗ ನಡೆಯುತ್ತಿರುವ ಎಪಿಸೋಡ್ ನಲ್ಲಿ ನಾಯಕಿ ಮಾಡುತ್ತಿರುವ ‘ಸಾಹಸ’ಗಳು.

ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಜಿಯವರ ಧಾರವಾಹಿಯಲ್ಲಿ ಈಗ ಕಥಾನಾಯಕ ರಾಮಚಾರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆಶ್ರಮದಲ್ಲಿ ಗುರೂಜಿಯೊಬ್ಬರು ಆತನಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಹಾಗಿದ್ದರೂ ಆತ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನ ತರಬೇಕು ಎಂದು ಆದೇಶಿಸುತ್ತಾರೆ. ಆದರೆ ದಟ್ಟ ಕಾಡಿನಲ್ಲಿ, ಕಾಡು ಪ್ರಾಣಿಗಳಿರುವ ಕಡೆ ರಾತ್ರಿ ಸಂಚಾರ ಮಾಡಿ ಜ್ಯೋತಿ ತರುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ.

ಹಾಗಿದ್ದರೂ ಗಂಡನ ರಾಮಚಾರಿ ಪತ್ನಿ, ಕಥಾನಾಯಕಿ ಚಾರುಲತಾ ದಟ್ಟ ಕಾಡಿನಲ್ಲಿ ಟಾರ್ಚ್ ಹಿಡಿದುಕೊಂಡು ರಾತ್ರಿ ವೇಳೆ ಸಂಚಾರ ಆರಂಭಿಸುತ್ತಾಳೆ. ಚಾರು ಪಾತ್ರಧಾರಿಯ ಈ ಅವತಾರ ನೋಡಿ ನೆಟ್ಟಿಗರು ಈ ಹಿಂದೆ ಇದೇ ರಾಮ್ ಜಿ ನಿರ್ದೇಶನದಲ್ಲಿ ಮೂಡಿಬಂದ ಪುಟ್ಟಗೌರಿ ಧಾರವಾಹಿಯಲ್ಲಿ ಕಥಾನಾಯಕಿಯ ಇದೇ ರೀತಿಯ ಸಾಹಸಗಳನ್ನು ಮಾಡಿದ್ದನ್ನು ನೆನೆಸಿಕೊಂಡಿದ್ದಾರೆ.

ರಾಮ್ ಜಿ ಧಾರವಾಹಿಗಳೆಂದರೆ ಇಂತಹ ಹೈಪ್ ಗಳೆಲ್ಲಾ ಕಾಮನ್. ಸತ್ತವರು ಎದ್ದು ಬರೋದು, ಬದುಕಿದ್ದವರು ಸಾಯೋದು ಎಲ್ಲಾ ಕಾಮನ್. ಜೊತೆಗೆ ನಾಯಕಿ ಈಗ ದಟ್ಟಾರಣ್ಯದಲ್ಲಿ ಕಾಡು ಪ್ರಾಣಿಗಳ ಜೊತೆ ಹೋರಾಡುವ ದೃಶ್ಯವೂ ಇರಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಸ್ಮಾರಕ ನೆಲಸಮ ಬೆನ್ನಲ್ಲೇ ಸಿಎಂ ಭೇಟಿಯಾದ ನಟ ಅನಿರುದ್ಧ್‌, ಯಾಕೆ ಗೊತ್ತಾ

ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜಾ ಪಾಂಡಲ್‌ಗೆ ನಟ ಸಿದ್ಧಾರ್ಥ್‌, ಜಾನ್ವಿ ಕಪೂರ್ ಭೇಟಿ

ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಬಯಲಾಯ್ತು ಸತ್ಯ

ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

ಅನುಶ್ರೀಗೆ ತಾಳಿ ಕಟ್ಟುವಾಗ ಕನ್ ಫ್ಯೂಸ್ ಆದ ರೋಷನ್: ಗಂಡನಿಗೆ ಗೈಡ್ ಮಾಡಿದ ಅನುಶ್ರೀ

ಮುಂದಿನ ಸುದ್ದಿ
Show comments