Publish Date: Mon, 24 Oct 2016 (13:19 IST)
Updated Date: Mon, 24 Oct 2016 (13:28 IST)
ಮುಂಬೈ: ದೊಡ್ಡ ಮೊತ್ತದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ನಿರೂಪಕರಾಗಿರುವ ಹಿಂದಿ ಅವತರಣಿಕೆಯ ಬಿಗ್ ಬಾಸ್ 10 ನೇ ಸೀಸನ್ ನಲ್ಲಿ ಭಾಗವಹಿಸಲು ಒಪ್ಪಿಕೊಂಡೆ ಎಂದು ನಟ ರಾಹುಲ್ ದೇವ್ ಹೇಳಿಕೊಂಡಿದ್ದಾರೆ.
“ನನ್ನ ಮಗ ವಿದೇಶದಲ್ಲಿ ಓದುತ್ತಿದ್ದೇನೆ. ಅವನ ವಿದ್ಯಾಭ್ಯಾಸಕ್ಕೆ ಹಣ ಬೇಕಾಗಿತ್ತು. ಆಗ ಬಿಗ್ ಬಾಸ್ ನಿಂದ ದೊಡ್ಡ ಮೊತ್ತದ ಆಫರ್ ಬಂತು. ಹಾಗಾಗಿ ಅದನ್ನು ಒಪ್ಪಿಕೊಂಡೆ” ಎಂದು ಈ ಖಳನಟ ಹೇಳಿಕೊಂಡಿದ್ದಾರೆ.
ಅಂದ ಹಾಗೆ ರಾಹುಲ್ ಗೆ ಹಿಂದಿನ ಸೀಸನ್ ನಲ್ಲೂ ಸ್ಪರ್ಧಿಯಾಗುವ ಆಫರ್ ಬಂದಿತ್ತಂತೆ. ಆದರೆ ಆಗ ಅದಕ್ಕೆ ಸಮಯವಿರಲಿಲ್ಲ. ಈಗ ಆವಶ್ಯಕತೆಯಿತ್ತು. ಹಾಗಾಗಿ ಒಪ್ಪಿಕೊಂಡೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರ ಹಾಕಿ ಆಟವಾಡಲು ನನಗೆ ಗೊತ್ತಿಲ್ಲ ಎಂದಿದ್ದಾರೆ ರಾಹುಲ್.
ರಾಹುಲ್ ದೇವ್ ಹಲವು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರಗಳಲ್ಲಿ ಖಳ ನಟರಾಗಿ ನಟಿಸಿ ಮನೆ ಮಾತಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ