ಬೆಂಗಳೂರು: ಕಿಚ್ಚ ಸುದೀಪ್ ಗೆ ಕಿರುತೆರೆ ಹೊಸದೇನಲ್ಲ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಬಿಗ್ ಬಾಸ್ ಮುಂತಾದ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಇದೀಗ ಈ ಬಾರಿ ಜೀ ಕನ್ನಡ ವಾಹಿನಿಗಾಗಿ ಧಾರವಾಹಿಯೊಂದನ್ನು ನಿರ್ಮಿಸಲಿದ್ದಾರೆ. ಅದರ ಹೆಸರು “ವಾರಸ್ದಾರ”. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ನಡಿ ಈ ಧಾರವಾಹಿ ನಿರ್ಮಾಣವಾಗಲಿದೆ.
ವಿಶೇಷವೆಂದರೆ ಈ ಧಾರವಾಹಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ಮೂಲಕ ನಮ್ಮೆಲ್ಲರಿಗೂ ಅಚ್ಚುಮೆಚ್ಚಾಗಿದ್ದ ಚೈತ್ರಾಲಿ ಪ್ರಮುಖ ಪಾತ್ರ ವಹಿಸಲಿದ್ದಾಳೆ. ಡ್ರಾಮಾ ಜ್ಯೂನಿಯರ್ಸ್ ಫೈನಲ್ ವರೆಗೆ ಬಂದು ಚಾಂಪಿಯನ್ ಆಗಿದ್ದ ಚೈತ್ರಾಲಿ ಇನ್ನು ಮುಂದೆ ಧಾರವಾಹಿ ಮೂಲಕ ಪ್ರತಿದಿ ನಿಮ್ಮ ಮುಂದೆ ಬರಲಿದ್ದಾಳೆ.
ಧಾರವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದ್ದು, ಸಮಯ ದಿನಾಂಕ ಸದ್ಯದಲ್ಲೇ ತಿಳಿದುಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ