Select Your Language

Notifications

webdunia
webdunia
webdunia
webdunia

ಸ್ಟಾರ್ ಸುವರ್ಣ ವಾಹಿನಿಯಿಂದ “ಶಿವರಾತ್ರಿ ಸಂಭ್ರಮ”

ಸ್ಟಾರ್ ಸುವರ್ಣ ವಾಹಿನಿಯಿಂದ “ಶಿವರಾತ್ರಿ ಸಂಭ್ರಮ”
Bangalore , ಬುಧವಾರ, 22 ಫೆಬ್ರವರಿ 2017 (17:22 IST)
ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ಹರ ಹರ ಮಹಾದೇವ ಧಾರಾವಾಹಿ ಮತ್ತೊಂದು ಪ್ರಮುಖ ಘಟ್ಟ ತಲುಪಿದೆ. ಇದೇ ಶಿವರಾತ್ರಿ ದಿನದಿಂದ (24.02.2017) ವಿನಾಯಕ ಗಜಮುಖನಾಗಿ ಕರುನಾಡ ವೀಕ್ಷಕರ ಮನೆಗೆ ಆಗಮಿಸಲಿದ್ದಾನೆ. ಈ ಹಿನ್ನಲೆಯಲ್ಲಿ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಸ್ಟಾರ್ ಸುವರ್ಣವಾಹಿನಿಯ ಶಿವರಾತ್ರಿ ಮಹಾ ಸಂಭ್ರಮ “ಮಹಾಯಾಗ” ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸಾಗರದ ಸಮ್ಮುಖದಲ್ಲಿ ಶಿವ, ಪಾರ್ವತಿ ಮತ್ತು ಬಾಲ ಗಣಪತಿ ವೇದಿಕೆಯನ್ನು ಹಂಚಿಕೊಂಡರು.
 
ಶಿವರಾತ್ರಿ ಹಬ್ಬದ ನಿಮಿತ್ತ ಸ್ಟಾರ್ ಸುವರ್ಣವಾಹಿನಿ ಜಾಗರಣೆಯ ಅಂಗವಾಗಿ “ಮಹಾಯಾಗ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಬೆಳಗ್ಗೆ ಆನಂದವಾಣಿಯ ಡಾ.ವಿದ್ವಾನ್ ಗೋಪಾಲಕೃಷ್ಣ ಗುರೂಜಿ ನೇತೃತ್ವದಲ್ಲಿ 11ಲಕ್ಷ ಶಿವನಾಮ ಜಪಕ್ಕೆ ಚಾಲನೆ ನೀಡಲಾಯಿತು. ಹಾಗೆ 1008 ಮೃತ್ತಿಕಾ ಶಿವಲಿಂಗ ವನ್ನು ಅಲ್ಲಿಯೇ ಭಕ್ತರು ಸಿದ್ಧಪಡಿಸಿ ಪ್ರತಿಷ್ಠಾಪಿಸಲಾಯಿತು. ಹಾಗೆ ಲೋಕಕಲ್ಯಾಣಾರ್ಥ “ಮಹಾ ರುದ್ರ ಯಾಗ”ವನ್ನು ನೆರೆವೆರಿಸಲಾಯಿತು.
 
ಅಂದು ಮಧ್ಯಾಹ್ನ ಬೆಂಗಳೂರಿನ ವಿವಿಧ ಬಡಾವಣೆಗಳಿಂದ ಆಗಮಿಸಿದ 50 ಕ್ಕೂ ಹೆಚ್ಚು ಭಜನಾ ಮಂಡಳಿಗಳಿಂದ “ಹರ ಭಜನೆ” ನಡೆಯಿತು. ಸಂಜೆ ನಟರಾಜನಿಗೆ “ನಾಟ್ಯ ನಮನ”ವನ್ನು ಹಮ್ಮಿಕೊಳ್ಳಲಾಗಿತ್ತು. ಸುವರ್ಣ ಲೇಡೀಸ್ ಕ್ಲಬ್‍ನ ಹಲವಾರು ತಂಡಗಳು ಶಿವ, ಪಾರ್ವತಿ ಮತ್ತು ಗಣೇಶನ ಹಾಡುಗಳಿಗೆ ನೃತ್ಯವನ್ನು ಮಾಡಿ ಮತ್ತಷ್ಟು ಮಂತ್ರಮುಗ್ಧರನ್ನಾಗಿ ಮಾಡಿಸಿದರು.
 
ಇಂಥಹ ಭವ್ಯ ವೇದಿಕೆಯಲ್ಲಿ ಹೃಣ್ಮನಸೆಳೆದ ಆ ಮಧುರ ಕ್ಷಣವೇ ಶಿವ,ಪಾರ್ವತಿಯ, ಬಾಲ ಗಜಮುಖನ ಆಗಮನ. ವೀಕ್ಷಕರ ಹರ್ಷೋಧ್ಗಾರದ ಮಧ್ಯೆ “ಹರ ಹರ ಮಹಾದೇವ” ಶಿರ್ಷಿಕೆ ಗೀತೆಯೊಂದಿಗೆ ಈ ಮೂವರು ವೇದಿಕೆಯನ್ನು ಅಲಂಕರಿಸಿದ್ದು ನೆರೆದಿದ್ದ ಜನಸ್ತೋಮ ಭಕ್ತಿಯ ಸಾಗರದಲ್ಲಿ ಮುಳಗಿದಂತಾಗಿತ್ತು. ಬಾಲ ಗಣೇಶ ತನ್ನ ಸಂಭಾಷಣೆಯಿಂದ ಎಲ್ಲರಗಮನ ಸೆಳದರೆ, ಶಿವ ಪಾರ್ವತಿ ಧಾರಾವಾಹಿಯ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
 
ಈ ಸುಸಂದರ್ಭದಲ್ಲಿ ಶ್ರೀ ಸಂಪೂರ್ಣ ವರಮಹಾಲಕ್ಷ್ಮೀ ಮಹಾಸಂಸ್ಥಾನದ ಸಂಸ್ಥಾಪಕರಾದ ಶ್ರೀ ನರೇಂದ್ರ ಬಾಬು ಶರ್ಮಾ ಗುರೂಜಿ ಆಗಮಿಸಿ ಶಿವರಾತ್ರಿ ಮತ್ತು “ಹರ ಹರ ಮಹಾದೇವ” ಧಾರಾವಾಹಿಯ ಬಗೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. 
 
ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಆಗಮಿಸಿ ಸ್ಟಾರ್ ಸುವರ್ಣ ವಾಹಿಯ “ಮಹಾಯಾಗ” ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆ ಶಾಸಕರಾದ ಗೋಪಾಲಗೌಡ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “ಸೂಪರ್ ಜೋಡಿಯ” ಕಾಳಿಸ್ವಾಮಿ, ಅರುಣ್ ಮತ್ತು ಸೌಮ್ಯಾ ಜೋಡಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆಯನ್ನು ತಂದುಕೊಟ್ಟರು.
 
ಶಿವರಾತ್ರಿಯಂದು ಸ್ಟಾರ್ ಸುವರ್ಣವಾಹಿನಿಯಲ್ಲಿ ಬೆಳಗ್ಗೆ 9ಕ್ಕೆ “ಹರ ಹರ ಮಹಾದೇವ” ದ ಪ್ರಮುಖ ಕಥೆಗಳನ್ನು ಇಟ್ಟುಕೊಂಡು “ಮಹಾ ಮೂವ್ಹಿ”ಯನ್ನು ಬಿತ್ತರಿಸಲು ನಿರ್ಧರಿಸಿದೆ. ಗಜಮುಖನಾಗಿ ವಿನಾಯಕನ ಆಗಮನ ರಾತ್ರಿ 7.30ರಿಂದ ಗಣೇಶನ ಆಗಮನದಿಂದ ನಳನಳಿಸುತ್ತಿರುವ ಕೈಲಾಸದಲ್ಲಿ ಆನಂದದಿಂದ ಮಹಾದೇವನ ಬರುವಿಕೆಗಾಗಿ ಕಾಯುತ್ತಿರುವ ಪಾರ್ವತಿಗೆ ಒಂದು ಘೋರ ಸಂಕಷ್ಟ ಎದುರಾಗುವ ಸನ್ನಿವೇಶವೊಂದು ನಿರ್ಮಾಣವಾಗುತ್ತಿದೆ.
 
ಮಹಾದೇವನ ಸ್ವಾಗತಕ್ಕೆ ಪಾರ್ವತಿ ಭರ್ಜರಿ ಸಿದ್ಧತೆ ಮಾಡಿಕೊಂಡಿರುತ್ತಾಳೆ, ಇದೇ ವೇಳೆಯಲ್ಲಿ ತಾನು ಅಭ್ಯಂಜನ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ, ಕಾವಲಿಗೆ ಗಣೇಶನನ್ನು ನಿಲ್ಲಿಸಿರುತ್ತಾಳೆ, ಹಲವಾರು ದಿನಗಳ ನಂತರ ತನ್ನ ಮನದರಸಿಯನ್ನು ಕಾಣಲು ನೇರ ಸ್ನಾನ ಗೃಹಕ್ಕೆ ಬರುವ ಮಹಾದೇವನ ಪರಿಚಯವಿಲ್ಲದೆ ಗಣೇಶ ಮಹಾದೇವನನ್ನು ಒಳಹೋಗದಂತೆ ತಡೆಯುತ್ತಾನೆ, ಸತತ ವಾಗ್ವಾದಗಳ ನಂತರ, ಮಹಾದೇವ ಎಷ್ಟೇ ಹೇಳಿದರು, ಅವನನ್ನು ತನ್ನ ತಂದೆಯಂದು ಒಪ್ಪದ ಗಣೇಶ ಒಳಹೋಗದಂತೆ ನಿರ್ಬಂಧ ಹೇರಲು ಕೃದ್ಧನಾದ ಮಹಾದೇವ ತನ್ನ ತ್ರಿಶೂಲದಿಂದ ಗಣೇಶನ ಕುತ್ತಿಗೆಯನ್ನು ತುಂಡರಿಸುತ್ತಾನೆ. 
 
ಇದರಿಂದ ಪಾರ್ವತಿ ಅತ್ಯಂತ ದುಃಖಿತಳಾಗುತ್ತಾಳೆ. ನಂತರ ಅವಳನ್ನು ಮನವೊಲಿಸಲು ಮಹಾದೇವ ಶಾಪಗ್ರಸ್ಥವಾದ ಆನೆಯೊಂದರ ಮುಖವನ್ನು ವಿನಾಯಕನ ಕುತ್ತಿಗೆಗ ಜೋಡಿಸಿ ಗಣೇಶನನ್ನು ಗಜಮುಖನನ್ನಾಗಿ ಮಾಡುತ್ತಾರೆ. ಈ ರೋಚಕಭರಿತವಾದ ಸನ್ನಿವೇಶಗಳನ್ನೊಳಗೊಂಡ ಕಂತು ಇದೇ ಫೆಬ್ರವರಿ 24ರ ಶುಕ್ರವಾರ ಮಹಾಶಿವರಾತ್ರಿಯಂದು  ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ರಿಂದ ಪ್ರಸಾರವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ ಪ್ರಥಮ್