Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನ ವಿಶೇಷ ಅತಿಥಿ ಯಾರು ಗೊತ್ತಾ?!

ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನ ವಿಶೇಷ ಅತಿಥಿ ಯಾರು ಗೊತ್ತಾ?!
Bangalore , ಸೋಮವಾರ, 20 ಮಾರ್ಚ್ 2017 (11:08 IST)
ಬೆಂಗಳೂರು:  ಮುಂದಿನ ವಾರದಿಂದ ಪ್ರತೀ ವಾರ ರಮೇಶ್ ಅರವಿಂದ್ ನಿಮ್ಮ ಮನೆಗೆ ಬರುತ್ತಿದ್ದಾರೆ. ಅಂದರೆ ಜೀ ಕನ್ನಡ ವಾಹಿನಿಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಮೂರನೇ ಸಂಚಿಕೆ ಆರಂಭವಾಗುತ್ತಿದೆ.

 

ಆದರೆ ಈ ಬಾರಿಯ ಸಂಚಿಕೆ ಭರ್ಜರಿಯಾಗಿಯೇ ಆರಂಭವಾಗಲಿದೆ. ಕನ್ನಡದ ಖ್ಯಾತ ನಟ, ರಾಜಕಾರಣಿ ನವರಸನಾಯಕ ಜಗ್ಗೇಶ್ ರಮೇಶ್ ಎದುರು ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ.

 
ಕಳೆದ ಎರಡೂ ಸಂಚಿಕೆಯಲ್ಲಿ ಈ ನಟನನ್ನು ಸಾಧಕರ ಸೀಟ್ ನಲ್ಲಿ ಕೂರಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಆದರೆ ಕಳೆದ ಬಾರಿ ಜಗ್ಗೇಶ್ ಬಂದಿರಲಿಲ್ಲ. ಕೊನೆಗೂ ಅಭಿಮಾನಿಗಳ ಬಯಕೆ ಈಡೇರಿದೆ.

 
ಈ ಸಂಚಿಕೆಯಲ್ಲಾದರೂ, ಸಿನಿಮೇತರ ರಂಗದ ಸಾಧಕರನ್ನು ಕರೆಸಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಸ್ವತಃ ರಮೇಶ್ ಅರವಿಂದ್ ಕೂಡಾ ಅದೇ ಭರವಸೆ ನೀಡಿದ್ದಾರೆ. ಯಾರೆಲ್ಲಾ ಬರುತ್ತಾರೆ? ಮುಂದಿನ ವಾರದಿಂದ ನೋಡಬೇಕು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಇಳಿಯರಾಜರಿಂದ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಲೀಗಲ್ ನೋಟಿಸ್ ಜಾರಿ