Select Your Language

Notifications

webdunia
webdunia
webdunia
webdunia

ಕಪಿಲ್ ಶರ್ಮಾ ಸಂಪಾದನೆ ಎಷ್ಟು ಗೊತ್ತಾ?

ಕಪಿಲ್ ಶರ್ಮಾ ಸಂಪಾದನೆ ಎಷ್ಟು ಗೊತ್ತಾ?
Mumbai , ಶುಕ್ರವಾರ, 9 ಡಿಸೆಂಬರ್ 2016 (10:30 IST)
ಕಪಿಲ್ ಶರ್ಮಾ ಅಂದ ಕೂಡಲೆ ಕಾಮಿಡಿ ನೈಟ್ಸ್ ಶೋ ಜ್ಞಾಪಕಕ್ಕೆ ಬರುತ್ತೆ. ಆ ಶೋ ಮೂಲಕ ಜನಪ್ರಿಯತೆ ಗಳಿಸಿದವರು ಕಪಿಲ್. ಆಮೇಲೆ ಬಾಲಿವುಡ್‌ಗೂ ಅಡಿಯಿಟ್ಟರು. ದೇಶದಲ್ಲೇ ಅತಿದೊಡ್ಡ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಹೆಸರು ಮಾಡಿದರು. 
 
ಇಷ್ಟೆಲ್ಲಾ ಹೆಸರು ಮಾಡಿದ ಕಪಿಲ್‌ರನ್ನು ಯಾರು ಕಳೆದುಕೊಳ್ಳಲು ಬಿಡುತ್ತಾರೆ? ಸೋನಿ ಎಂಟರ್‌ಟೈನ್‍ಮೆಂಟ್ ಸಂಸ್ಥೆ 2017ಕ್ಕೆ ಹೊಸ ಒಪ್ಪಂದ ಮಾಡಿಕೊಳ್ಳಲಿದೆಯಂತೆ. ಇದರಿಂದ ಬರುವ ವರ್ಷ ಕಪಿಲ್ ಆದಾಯ ಸುಮಾರು ರೂ.110 ಕೋಟಿ ಅನ್ನುತ್ತಿವೆ ಮೂಲಗಳು.
 
ಒಂದು ಎಪಿಸೋಡಿಗೆ ಕಪಿಲ್ ಸುಮಾರು 60-80 ಚಾರ್ಜ್ ಮಾಡುತ್ತಾರಂತೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿಹೆಚ್ಚು ಸಂಪಾದಿಸುವುವ ತಾರೆಗಳ ಪಟ್ಟಿಗೆ ಕಪಿಲ್ ಕೂಡ ಸೇರುವಂತಾಗಿದೆ.  ಇದಕ್ಕೂ ಮುನ್ನ ಕಲರ್ಸ್ ವಾಹಿನಯಲ್ಲಿ ನಡೆಸಿಕೊಟ್ಟ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ ಕೂಡ ಒಳ್ಳೆ ಲಾಭ ತಂದುಕೊಟ್ಟಿದೆಯಂತೆ.
 
ಮುಖ್ಯವಾಗಿ ವಾರಾಂತ್ಯದ ದಿನಗಳಲ್ಲಿ ಟಿವಿಯನ್ನು ಅಷ್ಟಾಗಿ ವೀಕ್ಷಿಸದ ಸಮಯದಲ್ಲೂ ವೀಕ್ಷಕರನ್ನು ಜನರ ಮುಂದೆ ಕೂರುವಂತೆ ಮಾಡಿತ್ತು ಈ ಶೋ. ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ದೊಡ್ಡದೊಡ್ಡ ಸ್ಟಾರ್‌ಗಳು ಈ ಶೋಗೆ ಬರುತ್ತಿರುತ್ತಾರೆ.  ಇನ್ನು ಹೀರೋಯಿನ್‌ಗಳಾದ ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿಯಂತ ಎತ್ತರದ ತಾರೆಗಳಿಗೆ ಕಿಸ್ ಕೊಡಬೇಕೆಂದರೆರ್ ಏಣಿ ತರಬೇಕಾಗುತ್ತದೆ ಎಂದು ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ ಕಪಿಲ್. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್‌ಗೆ ನೀರು ಕುಡಿಸಿದ ಯೋಗಾ ಗುರು