Select Your Language

Notifications

webdunia
webdunia
webdunia
webdunia

ವಿವಾದದಲ್ಲಿ ತಮಿಳು ಬಿಗ್ ಬಾಸ್ ಶೋ: ನಟಿಯರ ಜೊತೆ ಕಮಲ್ ಹಾಸನ್ ಬಂಧನಕ್ಕೆ ಆಗ್ರಹ

ಕಮಲ್ ಹಾಸನ್
ಚೆನ್ನೈ , ಬುಧವಾರ, 12 ಜುಲೈ 2017 (18:36 IST)
ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದಲ್ಲೇ ವಿವಾದಕ್ಕೆ ಸಿಲುಕಿದೆ. ತಮಿಳಿನ ಬಿಗ್ ಬಾಸ್ ಶೋದಿಂದ ಸಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ. ಕಾರ್ಯಕ್ರಮವನ್ನ ನಿಷೇಧಿಸಿ ನಿರೂಪಕ ಕಮಲ್ ಹಾಸನ್ ಅವರನ್ನ ಬಂಧಿಸುವಂತೆ ಹಿಂದೂ ಮಕ್ಕಳ ಕಚ್ಚಿ ಸಂಘಟನೆ ಆಗ್ರಹಿಸಿದೆ.

ಕಮಲ್ ಹಾಸನ್ ಸೇರಿ ಶೋನ ಸ್ಪರ್ಧಿಗಳಾದ ಒವಿಯಾ, ನಮಿತಾ, ಗಂಜ ಕರುಪ್ಪು ಮತ್ತು ಹರತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಿಗ್ ಬಾಸ್ ಶೋನಲ್ಲಿ ಈ ಸ್ಪರ್ಧಾಳುಗಳು ಅಶ್ಲೀಲ ಪದ ಬಳಕೆ ಜೊತೆ ಶೇ.75ರಷ್ಟು ಬೆತ್ತಲಾಗಿ ತಮಿಳು ಸಂಸ್ಕೃತಿ ಮತ್ತು 7 ಕೋಟಿ ತಮಿಳರ ಭಾವನೆಗಳಿಗೆ ಧಕ್ಕೆ ಮಾಡಿದ್ಧಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾನೂನಿನ ಪ್ರಕಾರ ಅವರನ್ನ ಬಂಧಿಸಿ, ಕಾರ್ಯಕ್ರಮ ನಿಷೇಧಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಎರಡು ದಿನ ನಟ ದಿಲೀಪ್ ಪೊಲೀಸ್ ಕಷ್ಟಡಿಗೆ