Select Your Language

Notifications

webdunia
webdunia
webdunia
webdunia

ಸೀರಿಯಲ್ ನಲ್ಲಿ ಮದುವೆಯಾದ ಹುಡುಗಿಯೊಂದಿಗೆ ರಿಯಲ್ ಮದುವೆಯಾದ ಗಟ್ಟಿಮೇಳ ಕಾಂತ

Gattimela

Krishnaveni K

ಬೆಂಗಳೂರು , ಸೋಮವಾರ, 19 ಫೆಬ್ರವರಿ 2024 (10:28 IST)
Photo Courtesy: Twitter
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟ ಕಾಂತ ಅಲಿಯಾಸ್ ರವಿಚಂದ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಹುದಿನಗಳ ಗೆಳತಿ ಹರಿಣಿ ಜೊತೆ ರವಿಚಂದ್ರ ನಿನ್ನೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರಿಣಿ ಕೂಡಾ ಮಾಡೆಲ್, ನಟಿ ಆಗಿದ್ದಾರೆ. ಅವರ ಮದುವೆಗೆ ಗಟ್ಟಿ ಮೇಳ ಧಾರವಾಹಿಯ ಕಲಾವಿದರು, ಸ್ನೇಹಿತರು, ಕುಟುಂಬಸ್ಥರು ಬಂದು ಶುಭ ಹಾರೈಸಿದ್ದಾರೆ. ಮದುವೆ ವಿಡಿಯೋ, ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಗಟ್ಟಿಮೇಳ ಧಾರವಾಹಿಯಲ್ಲಿ ಕಾಮಿಡಿ ಪಾತ್ರ ಮಾಡುತ್ತಿದ್ದ ರವಿಚಂದ್ರ ನಾಯಕನ ಬಲಗೈ ಬಂಟನಾಗಿದ್ದರು. ಧಾರವಾಹಿ ಆರಂಭದಿಂದಲೂ ಅವರು ಭಗ್ನ ಪ್ರೇಮಿಯಾಗಿದ್ದರು. ಧಾರವಾಹಿಯ ಕೊನೆಯ ಎಪಿಸೋಡ್ ನಲ್ಲಿ ಕೊನೆಗೂ ಅವರಿಗೆ ಮದುವೆಯಾಗಿತ್ತು. ವಿಶೇಷವೆಂದರೆ ಸೀರಿಯಲ್ ನಲ್ಲಿ ಮದುವೆಯಾದ ನಟಿಯೇ ಅವರ ನಿಜ ಜೀವನದ ಸಂಗಾತಿಯಾಗಿದ್ದಾರೆ. ಅವರ ಮದುವೆ ಎಪಿಸೋಡ್ ಮೂಲಕ ಗಟ್ಟಿಮೇಳ ಧಾರವಾಹಿ ಎಂಡ್ ಆಗಿತ್ತು. ಇದೀಗ ನಿಜ ಜೀವನದಲ್ಲೂ ನಿಜವಾಗಿಯೂ ಕಾಂತನ ಮುದವೆಯಾಗಿದೆ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಮದುವೆಗೆ ನಟ ಅಭಿದಾಸ್, ಶರಣ್ಯ ಶೆಟ್ಟಿ, ಸನತ್, ಗಿರೀಶ್ ಬೆಟ್ಟಪ್ಪ ಸೇರಿದಂತೆ ಅನೇಕರು ಆಗಮಿಸಿ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತಿನಿಂದಲೇ ಮತ್ತೆ ಕೆಟ್ಟ ನವರಸನಾಯಕ ಜಗ್ಗೇಶ್