ಬೆಂಗಳೂರು: ಕಲರ್ಸ್ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಈ ವಾರ ಐದು ಮಂದಿ ನಾಮಿನೇಟ್ ಆಗಿದ್ದಾರೆ.
ಅವರಲ್ಲಿ ಪ್ರಥಮ್, ಸಂಜನಾ, ಶೀತಲ್ ಶೆಟ್ಟಿ ಮತ್ತು ರೇಖಾ ಅವರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡಿದ್ದಾರೆ. ಅಲ್ಲದೆ ಈ ವಾರದ ಕ್ಯಾಪ್ಟನ್ ಮಾಳವಿಕಾ ಅವರು ನೇರವಾಗಿ ನಾಮಿನೇಟ್ ಮಾಡಿದ ಶಾಲಿನಿ ಕೂಡಾ ವೀಕ್ಷಕರ ಮತದ ನಿರೀಕ್ಷೆಯಲ್ಲಿದ್ದಾರೆ.
ನಾಮಿನೇಟ್ ಪ್ರಕ್ರಿಯೆ ಮುಗಿದ ಮೇಲೆ ಪ್ರತೀ ವಾರ ನಾಮಿನೇಟ್ ಆಗುತ್ತಿರುವ ಸಂಜನಾ ಮತ್ತು ಪ್ರಥಮ್ ಪರಸ್ಪರ ದುಃಖ ಹಂಚಿಕೊಂಡಿದ್ದೂ ಆಯ್ತು. ದೀಪಾವಳಿ ಹಬ್ಬವಾದ್ದರಿಂದ ಮನೆಯಲ್ಲಿ ಲಕ್ಷ್ಮಿ ಪೂಜೆಯೂ ನಡೆಯಿತು. ಮೋಹನ್ ಮಂತ್ರ ಹೇಳಿದ್ದು, ನಟಿ ರೇಖಾ ಭಕ್ತಿಗೀತೆ ಹಾಡಿ ಮನೆಯವರೆಲ್ಲಾ ಆರತಿ ಮಾಡಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ