Publish Date: Thu, 26 Jan 2017 (12:32 IST)
Updated Date: Thu, 26 Jan 2017 (12:37 IST)
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 4 ನಿರ್ಣಾಯಕ ಹಂತಕ್ಕೆ ಬಂದು ಮುಟ್ಟಿದೆ. ಇದೇ ಜನವರಿ 29ಕ್ಕೆ ಸೀಸನ್ 4ರ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ. ಅಂತಿಮ ಸ್ಪರ್ಧೆಗೆ ಮನೆಯಲ್ಲಿ ಕೇವಲ ಐದು ಮಂದಿ ಮಾತ್ರ ಇದ್ದಾರೆ.
ನಟಿ ಮತ್ತು ನಿರೂಪಕಿ ಶಾಲಿನಿ ಮನೆಯಿಂದ ಹೊರಬಿದ್ದಿದ್ದು, ಈಗ ಕಿರಿಕ್ ಕೀರ್ತಿ, ರೇಖಾ, ಮೋಹನ್, ಪ್ರಥಮ್ ಮತ್ತು ಮಾಳವಿಕಾ ಅವಿನಾಶ್ ಮಾತ್ರ ಇದ್ದಾರೆ. ಈ ಐದು ಜನರಲ್ಲಿ ಯಾರಿಗೆ ಗೆಲುವಿನ ಮಾಲೆ ಬೀಳಲಿದೆ ಎಂಬುದು ಜನವರಿ 29ಕ್ಕೆ ಗೊತ್ತಾಗಲಿದೆ.
ಗ್ರ್ಯಾಂಡ್ ಫಿನಾಲೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ರಂಗೇರಿಸಲಿದ್ದಾರೆ. ಅಂತಿಮ ಹಣಾಹಣಿ ಕಲರ್ಸ್ ಕನ್ನಡ ವಾಹಿನಿಗೆ ಬದಲಾಗಿ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.