Publish Date: Mon, 28 Nov 2016 (11:29 IST)
Updated Date: Mon, 28 Nov 2016 (11:47 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಜನರಿಗೆ ಆಗಾಗ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ನಿಜವಾಗಿಯೂ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಒಮ್ಮೆಯೂ ಸಂಪರ್ಕ ಸಾಧಿಸುವುದೇ ಇಲ್ಲವೇ ಅಥವಾ ನಮಗೆ ಹಾಗೆ ತೋರಿಸುವುದು ಮಾತ್ರವೇ ಎಂದೆಲ್ಲಾ. ಅದನ್ನು ಪುಷ್ಠೀಕರಿಸುವಂತಹ ಒಂದು ಫೋಟೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ 46 ನೇ ದಿನ ಹೃದಯ ಕಳ್ಳ ಟಾಸ್ಕ್ ನಡೆಯುವಾಗ ಸ್ಪರ್ಧಿಯೊಬ್ಬರು ಮೊಬೈಲ್ ಫೋನ್ ಹಿಡಿದುಕೊಂಡಿರುವ ದೃಶ್ಯ ಫೇಸ್ ಬುಕ್ ನಲ್ಲಿ ಯಾರೋ ಪ್ರಕಟಿಸಿದ್ದಾರೆ. ಕೀರ್ತಿ ಕುಮಾರ್ ಹೃದಯದ ಭಾವ ಚಿತ್ರ ಹುಡುಕುವಾಗ ಮೊಬೈಲ್ ಕೈಯಲ್ಲಿ ಹಿಡಿದುಕೊಂಡಿರುವ ಭಾವ ಚಿತ್ರ ಪ್ರಕಟವಾಗಿದೆ.
ಇದನ್ನು ಯಾರೋ ಕಿಚ್ಚ ಸುದೀಪ್ ಟ್ವಿಟರ್ ಗೆ ಟ್ಯಾಗ್ ಮಾಡಿದ್ದು, ಪ್ರತಿಕ್ರಿಯಿಸಲು ಕೋರಿದ್ದಾರೆ. ಆದರೆ ಸುದೀಪ್ ಮಾತ್ರ ಇದನ್ನೆಲ್ಲಾ ಅಲ್ಲಗಳೆದಿದ್ದಾರೆ. ಈ ಆರೋಪಕ್ಕೆ ಬೆಲೆಯೇ ಕೊಡಬೇಕಾಗಿಲ್ಲ ಎಂದಿದ್ದಾರೆ ಅವರು. ಅಲ್ಲದೆ ಇದು ಯಾರದೋ ಕುತಂತ್ರ ಎಂದು ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಬಿಗ್ ಬಾಸ್ ಮನೆಯೊಳಗೆ ನಡೆಯುವ ವಿದ್ಯಮಾನಗಳನ್ನು ಸಂಶಯದ ಕಣ್ಣಿನಿಂದ ನೋಡುವವರಿಗೆ ಇದೊಂದು ವಿಷಯ ಸಿಕ್ಕಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ