Select Your Language

Notifications

webdunia
webdunia
webdunia
webdunia

ಧಾರಾವಾಹಿ ನಟಿಗೆ ರೂ.16 ಲಕ್ಷದ ನೋಟೀಸ್

ಧಾರಾವಾಹಿ ನಟಿಗೆ ರೂ.16 ಲಕ್ಷದ ನೋಟೀಸ್
Mumbai , ಶನಿವಾರ, 24 ಡಿಸೆಂಬರ್ 2016 (12:42 IST)
ಕಿರುತೆರೆ ಜನಪ್ರಿಯ ನಟಿ ದೀಪಿಕಾ ಸಿಂಗ್, ದಿಯಾ ಔರ್ ಬಾಟಿ ಹಮ್ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸೀರಿಯಲ್ ತೆಲುಗು ಭಾಷೆಗೆ ’ಈತರಂ ಇಲ್ಲಾಲು’ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿದೆ. ಆದರೆ ದೀಪಿಕಾ ಸೆಟ್‌ಗೆ ತಡವಾಗಿ ಬರುತ್ತಿದ್ದಾರಂತೆ. ಇದಕ್ಕಾಗಿ ರೂ.16 ಲಕ್ಷ ಕಟ್ಟಬೇಕು ಎಂದು ನಿರ್ಮಾಪಕರು ನೋಟೀಸ್ ಜಾರಿ ಮಾಡಿದ್ದಾರೆ.
 
ಆದರೆ ನಿರ್ಮಾಪಕರು ದೀಪಿಕಾಗೆ ರೂ.1.14 ಕೋಟಿ ಸಂಭಾವನೆ ಬಾಕಿ ಉಳಿಸಿಕೊಂಡಿದ್ದು, ರೂ.67 ಲಕ್ಷ ಮಾತ್ರ ಕೊಡುತ್ತೇನೆಂದು ಹೇಳಿದ್ದ ಕಾರಣ ಇಬ್ಬರ ನಡುವೆ ವಿವಾದ ನೆಲೆಗೊಂಡಿದ್ದ ಬಗ್ಗೆ ಸುದ್ದಿ ಇದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘವನ್ನು ಸಂಪರ್ಕಿಸಿದ್ದಾರಂತೆ. 
 
ಆಮೇಲೆ ರೂ.67 ಲಕ್ಷ ಕೊಡಲಾಗಿದೆಯಂತೆ. ಈಗ ನಿರ್ಮಾಪಕರು ಸೆಟ್‍ಗೆ ತಡವಾಗಿ ಬಂದರೆಂದು ರೂ.16 ಲಕ್ಷ ಕೊಡಬೇಕೆಂದು ನೋಟೀಸ್ ಜಾರಿ ಮಾಡಿರುವುದು ಶಾಕಿಂಗ್ ಕೊಟ್ಟಿದೆ. ಮೂಲಗಳ ಪ್ರಕಾರ ದೀಪಿಕಾ ನಿಜವಾಗಿಯೂ ಸೆಟ್‍ಗೆ ತಡವಾಗಿ ಬರುತ್ತಿದ್ದಂತೆ. ಇದಕ್ಕೆಲ್ಲಾ ತನ್ನ ಸಹನಟ ಅನಾಸ್ ರಶೀದ್ ಕಾರಣವಂತೆ.
 
ಬೆಳಗ್ಗೆ 10 ಗಂಟೆಗೆ ಸೆಟ್‌ಗೆ ಬರಬೇಕಾಗಿರುವ ಅನಾಸ್ ಸಾಯಂಕಾಲ 4 ಗಂಟೆಗೆ ಬರುತ್ತಿದ್ದರಂತೆ. ನಾಯಕ ಇಲ್ಲದೆ ತಾನು ಮುಂಚಿತವಾಗಿ ಬಂದು ಮಾಡುವುದೇನೆಂದು ಪ್ರಿಯಾಂಕಾ ಸಹ ತಡವಾಗಿ ಬರುತ್ತಿದ್ದರಂತೆ. ಒಂದು ಟಿವಿ ಸೀರಿಯಲ್‍ನಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದಕ್ಕೆ ಇದೊಂದು ನಿದರ್ಶನ ಅಷ್ಟೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್-ಪ್ರಿಯಾಂಕಾ ಮತ್ತೊಮ್ಮೆ ಪ್ರೇಕ್ಷಕರ ಮುಂದೆ