Publish Date: Thu, 22 Jun 2017 (13:12 IST)
Updated Date: Thu, 22 Jun 2017 (13:55 IST)
ಸಾಧಕರನ್ನ ಕರೆಸಿ ಅವರ ಜೀವನಗಾಥೆಯನ್ನ ಬಿಚ್ಚಿಡುವ ಖಾಸಗಿ ಚಾನಲ್`ನ ವಿಶಿಷ್ಟ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಮಾಜಿ ಪ್ರಧಾನಿ ದೇವೇಗೌಡ, ಪತ್ರಕರ್ತ ಎಚ್.ಆರ್ ರಂಗನಾಥ್, ಸಿನಿ ತಾರೆಯರಾದ ಶಿವಣ್ಣ, ಪುನೀತ್, ಉಪ್ಪಿ, ರವಿಚಂದ್ರನ್, ಪ್ರಕಾಶ್ ರೈ ಹೀಗೆ ಹತ್ತು ಹಲವು ಸಾಧಕರನ್ನ ಕರೆಸಲಾಗಿತ್ತು. ಇದೀಗ, ಸಿಎಂ ಸಿದ್ದರಾಮಯ್ಯನವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಳಗ್ಗೆ 11ಗಂಟೆಯಿಂದ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿ, ಸೊಸೆ ಮತ್ತು ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೂನ್ 24ರಂದು ಕಾರ್ಯಕ್ರಮ ಪ್ರಸಾರವಾಗಲಿದೆ ಎನ್ನಲಾಗಿದೆ. ಕವಿತಾ ಲಂಕೇಶ್ ನಿರ್ದೇಶನದ ಹಾಲಿಡೇಸ್ ಚಿತ್ರದಲ್ಲೂ ಸಿಎಂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವ ಸಿಎಂ, ಮಾಲ್`ಗೆ ತೆರಳಿ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ವೀಕ್ಷಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ