Select Your Language

Notifications

webdunia
webdunia
webdunia
webdunia

ಕಿರಿಕ್ ಪಾರ್ಟಿಯನ್ನ ಹೊರ ಕಳುಸಿದ ಬಿಗ್ ಬಾಸ್!

ಕಿರಿಕ್ ಪಾರ್ಟಿಯನ್ನ ಹೊರ ಕಳುಸಿದ ಬಿಗ್ ಬಾಸ್!
Mumbai , ಭಾನುವಾರ, 25 ಡಿಸೆಂಬರ್ 2016 (12:09 IST)
ಬಿಗ್ ಬಾಸ್ ರಿಯಾಲಿಟಿ ಶೋ ಇರೋದೆ ಕಿರಿಕ್ ಪಾರ್ಟಿಗಳಿಗೆ. ಅದರಲ್ಲೂ ಟಿಆರ್‌ಪಿ ತಂದುಕೊಡುವ ಅಭ್ಯರ್ಥಿಗಳೆಂದರೆ ಈ ಶೋಗೆ ಅಚ್ಚುಮೆಚ್ಚು. ಶೋ ಉದ್ದಕ್ಕೂ ಕಿರಿಕಿರಿ ಮಾಡುತ್ತಲೇ ಬಂದಿದ್ದ ಸ್ಪರ್ಧಿಯೊಬ್ಬ ಕೆಟ್ಟ ವರ್ತನೆಗೆ ಬೇಸತ್ತು ಅವರನ್ನು ಹೊರಗೆ ಕಳುಸಿರುವ ಘಟನೆ ಹಿಂದಿ ಬಿಗ್ ಬಾಸ್ ನಲ್ಲಿ ನಡೆದಿದೆ. 
 
ಸಾಮಾನ್ಯವಾಗಿ ಈ ಶೋ ನಿರೂಪಕರಾದ ಸಲ್ಮಾನ್ ಖಾನ್ ಯಾವತ್ತೂ ಬೇಸರ ಮಾಡಿಕೊಂಡಿದ್ದಾಗಲಿ, ಕೋಪಗೊಂಡಿದ್ದಾಗಲಿ ನಡೆದಿರಲಿಲ್ಲ. ಆದರೆ ನಿನ್ನೆ ಮಾತ್ರ ಸ್ಪರ್ಧಿಯೊಬ್ಬರ ವಿರುದ್ಧ ಕೆಂಡಾಮಂಡಲವಾದ ಘಟನೆ ನಡೆದಿದೆ. 
 
ಶೋ ಆರಂಭವಾ ದಿನದಿಂದ ಇತರೆ ಸ್ಪರ್ಧಿಗಳೊಂದಿಗೆ ದುರ್ವತನೆ ತೋರಿಸಿಕೊಂಡು ಬಂದಿದ್ದ ಪ್ರಿಯಾಂಕಾ ಜಗ್ಗ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಲ್ಮಾನ್, ಕೊನೆಯಲ್ಲಿ ಮನೆಯಿಂದ ಹೊರಹೋಗುವಂತೆ ಮಾಡಿದ್ದಾರೆ. 
 
ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಏನಾದರೂ ನಡೆಯಬಹುದು ಎಂಬುದು ಸಾಬೀತಾಗಿದೆ.  ನಿರೂಪಕರೊಬ್ಬರು ಸ್ಪರ್ಧಿಯನ್ನು ಹೊರಹಾಕುತ್ತಿರುವುದು ಇದೇ ಮೊದಲು. ಅವರು ಮತ್ತೆ ಶೋಗೆ ಬಂದರೆ ನಾನು ಈ ಶೋ ನಡೆಸಿಕೊಡಲ್ಲ ಎಂದು ಸಲ್ಲು ರಾಂಗ್ ಆಗಿದ್ದಾರೆ. ಮೊದಲ ವಾರದಲ್ಲೇ ಪ್ರಿಯಾಂಕಾ ಎಲಿಮಿನೇಟ್ ಆಗಿದ್ದರು. ಆಮೇಲೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹೆಬ್ಬುಲಿ ಆಡಿಯೋ ಬಿಡುಗಡೆ