Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಶೀತಲ್ ಶೆಟ್ಟಿ, ಶಾಲಿನಿ ರೀ ಎಂಟ್ರಿ

ಬಿಗ್ ಬಾಸ್ ಕನ್ನಡ: ಶೀತಲ್ ಶೆಟ್ಟಿ, ಶಾಲಿನಿ  ರೀ ಎಂಟ್ರಿ
Bangalore , ಮಂಗಳವಾರ, 15 ನವೆಂಬರ್ 2016 (12:31 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಕಳೆದ ವಾರ ಹೊರ ಹೋಗಿದ್ದ ಶೀತಲ್ ಶೆಟ್ಟಿ ಮತ್ತು ಶಾಲಿನಿ ಮರಳಿ ಬಂದಿದ್ದಾರೆ. ಇವರಿಬ್ಬರೂ ನಾಮಿನೇಟ್ ಆಗಿ ಹೊರ ಹೋಗಿದ್ದರು. ಆದರೆ  ಒಂದು ವಾರ ಕಾಲ ಸೀಕ್ರೆಟ್ ರೂಂ ನಲ್ಲಿ ಕುಳಿತು ಮನೆಯ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದರು.

ಈ ವಾರ ಕಾವ್ಯಾ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ಅವರ ಸ್ಥಾನಕ್ಕೆ ಇವರಿಬ್ಬರೂ ಪ್ರಬಲ ಸ್ಪರ್ಧಿಗಳು ಮರಳಿದ್ದಾರೆ. ಇದೇ ವೇಳೆ ಈ ವಾರದ ಕ್ಯಾಪ್ಟನ್ ಆಗಿ ನಿರಂಜನ್ ದೇಶಪಾಂಡೆ ಆಯ್ಕೆಯಾಗಿದ್ದಾರೆ. ಪ್ರಥಮ್ ನ್ನು ಮನೆಯ ಸದಸ್ಯರು ನಾಮಿನೇಟ್ ಮಾಡಿರಲಿಲ್ಲ. ಹಾಗಾಗಿ ಈ ವಾರವಾದರೂ ಎಲಿಮಿನೇಷನ್ ಭಯದಿಂದ ಮುಕ್ತರಾಗಿರಬಹುದು ಎಂದು ಅಂದುಕೊಳ್ಳುತ್ತಿರುವಾಗಲೇ ಕ್ಯಾಪ್ಟನ್ ನಿರಂಜನ್ ಪ್ರಥಮ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಈ ವಾರ ನಾಮಿನೇಟ್ ಆದ ಇತರರೆಂದರೆ, ಮಾಳವಿಕಾ, ಕಾರುಣ್ಯ ರಾಂ, ಮೋಹನ್ ಮತ್ತು ಭುವನ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆರೆಗೆ ಬರಲಿದೆ ಕಬಾಲಿ 2, ರಜನೀಕಾಂತ್ ಒಪ್ಪುವುದಷ್ಟೇ ಬಾಕಿ