Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ರಿಯಾಲಿಟಿ ಶೋ: ಸೀಕ್ರೆಟ್ ರೂಂ ನಲ್ಲಿ ಶಾಲಿನಿ, ಶೀತಲ್ ಶೆಟ್ಟಿ

ಬಿಗ್ ಬಾಸ್ ರಿಯಾಲಿಟಿ ಶೋ: ಸೀಕ್ರೆಟ್ ರೂಂ ನಲ್ಲಿ ಶಾಲಿನಿ, ಶೀತಲ್ ಶೆಟ್ಟಿ
Bangalore , ಮಂಗಳವಾರ, 8 ನವೆಂಬರ್ 2016 (13:04 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಮನೆಯಿಂದ ಶನಿವಾರ ಎಲಿಮಿನೇಟ್ ಆಗಿದ್ದ ಶಾಲಿನಿ ಮತ್ತು ಶೀತಲ್ ಶೆಟ್ಟಿ ಇನ್ನೂ ಮನೆಯೊಳಗೇ ಇದ್ದಾರೆ!

ಶನಿವಾರವಷ್ಟೇ ಮನೆಯಿಂದ ಹೊರ ಹೋದ ಇಬ್ಬರು ಸ್ಪರ್ಧಿಗಳು ಮತ್ತೆ ಹಿಂಬಾಗಿಲಿನಿಂದ ಮನೆ ಒಳಗೆ ಪ್ರವೇಶಿಸಿದ್ದಾರೆ. ಆದರೆ ಇತರ ಸ್ಪರ್ಧಿಗಳಿಗೆ ಕಾಣಿಸಿಕೊಳ್ಳದೆ ಸೀಕ್ರೆಟ್ ರೂಂ ಒಳಗಿದ್ದುಕೊಂಡೇ ಮನೆಯೊಳಗಿನ ವಿದ್ಯಮಾನಗಳನ್ನು ವೀಕ್ಷಿಸುತ್ತಿದ್ದಾರೆ.

ಇವರಿಬ್ಬರೂ ಪ್ರಬಲ ಸ್ಪರ್ಧಿಗಳು ಶನಿವಾರ ಎಲಿಮಿನೇಟ್ ಆಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಇದೀಗ ಮತ್ತೆ ಮನೆ ಒಳ ಪ್ರವೇಶಿಸಿದ್ದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಇದೇ ವೇಳೆ ಈ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು ಪ್ರಥಮ್ ಈ ವಾರವೂ ನಾಮಿನೇಟ್ ಆಗಿದ್ದಾರೆ. ಅವರ ಜತೆಗೆ  ಮಾಳವಿಕಾ, ಕಾವ್ಯಾ ಶಾಸ್ತ್ರಿ,ಓಂ ಪ್ರಕಾಶ್ ರಾವ್, ನಿರಂಜನ್ ದೇಶಪಾಂಡೆ ನಾಮಿನೇಟ್ ಆಗಿದ್ದಾರೆ. ಮೋಹನ್ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮಾಳವಿಕಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿ ಗುಡಿ ದುರಂತ: ಸಾಹಸ ನಿರ್ದೇಶಕ ರವಿ ವರ್ಮಾ ನಾಪತ್ತೆ!