Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!
ಬೆಂಗಳೂರು , ಗುರುವಾರ, 11 ಜನವರಿ 2018 (09:56 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಚಂದನ್ ಮತ್ತು ಅನುಪಮಾ ನಡುವೆ ಜೋರಾಗಿ ಮದುವೆ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಾನು ಸಿಂಗಲ್ ಆಗಿಯೇ ಇರುತ್ತೇನೆ, ಮದುವೆ ಆಗಲು ಇಷ್ಟವಿಲ್ಲ ಎಂದು ಅನುಪಮಾ ಘೋಷಿಸಿದ್ದೂ ಆಯಿತು!

ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಸಮೀರ್ ಆಚಾರ್ಯ ಮತ್ತು ದಿವಾಕರ್ ಜತೆಗೆ ಅನುಪಮಾ ಹಾಗೂ ಚಂದನ್ ಮದುವೆ ಬಗ್ಗೆ ಜೋರು ಜೋರಾಗಿ ಚರ್ಚೆ ನಡೆಸುತ್ತಿದ್ದರು. ಈ ನಡುವೆ ಚಂದನ್ ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಹೇಳುತ್ತಿದ್ದರು.

ಈ ಸಂದರ್ಭದಲ್ಲಿ ಸಮೀರ್ ಹಾಗೂ ಚಂದನ್ ಅನುಪಮಾಗೆ ಮದುವೆಯಾಗುವಂತೆ ಸಲಹೆ ಕೊಟ್ಟರು. ಆದರೆ ಅನುಪಮಾ ನನಗೆ ಸಿಂಗಲ್ ಆಗಿಯೇ ಇರಲು ಇಷ್ಟ. ವಂಶ ಬೆಳೆಸಲು ನನ್ನ ತಂಗಿ ಇದ್ದಾಳೆ. ನಾನು ಮದುವೆ ಆಗಲ್ಲಪ್ಪಾ. ಯಾರಿಗೆ ಬೇಕು ಸಂಸಾರ ಕಷ್ಟ ಎಂದು ಹೇಳಿಕೊಂಡರು.  ಈ ಸಂದರ್ಭದಲ್ಲಿ ಸಮೀರ್ ಆಚಾರ್ಯ ಮಂತ್ರ ಹೇಳಿ ಇಬ್ಬರಿಗೂ ಮದುವೆಯೇ ಮಾಡಿಸಿಬಿಟ್ರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಲಾಶ್ರೀ, ಸಾಧುಕೋಕಿಲ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ