Webdunia - Bharat's app for daily news and videos

Install App

ಬಿಬಿಕೆ9: ಮನೆಯೊಳಗೆ ಅನುಪಮಾ ಮೊಬೈಲ್ ಬಳಸಿದ್ರಾ? ಅಸಲಿ ಸತ್ಯವೇನು?

Webdunia
ಮಂಗಳವಾರ, 8 ನವೆಂಬರ್ 2022 (08:20 IST)
Photo Courtesy: facebook
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದರೆ ಹೊರಗಿನ ಪ್ರಪಂಚವನ್ನು ಸಂಪರ್ಕಿಸುವಂತಹ ಯಾವುದೇ ಸಾಧನ ಬಳಸುವಂತಿಲ್ಲ.

ಆದರೆ ಬಿಗ್ ಬಾಸ್ ಮನೆಯೊಳಗೆ ಅನುಪಮಾ ಮೊಬೈಲ್ ಬಳಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಿನ್ನೆ ಪ್ರಸಾರವಾದ ಎಪಿಸೋಡ್ ತುಣುಕು.

ಈ ಎಪಿಸೋಡ್ ನಲ್ಲಿ ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ನಡುವೆ ವಾಗ್ವಾದ ನಡೆಯುತ್ತಿರುತ್ತದೆ. ಈ ವೇಳೆ ರೂಪೇಶ್ ರಾಜಣ್ಣ ಹಿಂದೆ ಇದ್ದ ಅನುಪಮಾ ಮೊಬೈಲ್ ನಂತಹ ಸಾಧನ ಬಳಸಿ ಬ್ರೌಸ್ ಮಾಡುತ್ತಿದ್ದಂತೆ ಅನಿಸುತ್ತದೆ. ಇದನ್ನು ನೋಡಿ ನೆಟ್ಟಿಗರು ಫೋಟೋ ಸಮೇತ ಅನುಪಮಾ ಮೊಬೈಲ್ ಬಳಸಿದ್ದಾರೆ ಎಂದು ಎತ್ತಿ ತೋರಿಸಿದ್ದಾರೆ.  ಆದರೆ ನಿಜವಾಗಿ ಅನುಪಮಾ ಕ್ಲೀನ್ ಮಾಡುವ ಬ್ರಷ್ ನ್ನು ಹಿಡಿದು ಕಸ ಕಡ್ಡಿ ತೆಗೆಯುತ್ತಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾದ ತುಣುಕಿನಲ್ಲಿ ಅನುಪಮಾ ರೂಪೇಶ್ ರಾಜಣ್ಣಗಿಂತ ಹಿಂದೆ ನಿಂತಿದ್ದು, ಅವರ ಕೈ ಅಸ್ಪಷ್ಟವಾಗಿ ಕಾಣಿಸುತ್ತಿದ್ದರಿಂದ ಥೇಟ್ ಮೊಬೈಲ್ ಹಿಡಿದಂತೆ ತೋರುತ್ತಿತ್ತು. ಇದೇ ತಪ್ಪು ತಿಳುವಳಿಕೆಗೆ ಕಾರಣವಾಗಿದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments