Webdunia - Bharat's app for daily news and videos

Install App

BBK11: ಇದನ್ನೂ ನಿನ್ನ ಹೆಂಡ್ತಿ ನೋಡಲ್ವಾ ಎಂದು ಧನರಾಜ್ ಗೆ ಪ್ರಶ್ನೆ ಮಾಡಿದ ವೀಕ್ಷಕರು

Krishnaveni K
ಮಂಗಳವಾರ, 15 ಅಕ್ಟೋಬರ್ 2024 (10:48 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮನೆಗೆ ನಗಿಸುವ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಕಾಮೆಡಿಯನ್ ಧನರಾಜ್ ಆಚಾರ್ ಯಾಕೋ ಕಣ್ಣೀರ ಧಾರೆ ಸುರಿಸುವುದರಿಂದಲೇ ಫೇಮಸ್ ಆಗ್ತಿದ್ದಾರೆ. ಇಂದಿನ ಎಪಿಸೋಡ್ ನಲ್ಲಿ ಅವರು ಮತ್ತೆ ಕಣ್ಣೀರು ಹಾಕಿ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಮೊದಲೇ ಸುದೀಪ್ ಅವರನ್ನು ಹಳೆಯ ರೀಲ್ಸ್ ನಲ್ಲಿ ಬಿಗ್ ಬಾಸ್ ನ್ನೇ ತಮಾಷೆ ಮಾಡಿರುವುದಕ್ಕೆ ಕಾಲೆಳೆದಿದ್ದರು. ಆಗಲೇ ಸಪ್ಪೆ ಮುಖ ಮಾಡಿದ್ದ ಧನರಾಜ್ ಬಳಿಕ ಸುದೀಪ್ ಮಾಡಿದ್ದು ತಮಾಷೆಗಾಗಿ ಎಂದು ತಿಳಿದು ಖುಷಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದರು.

ಮೊದಲ ವಾರವೇ ಟಾಸ್ಕ್ ನಡೆಸುವ ವಿಚಾರದಲ್ಲಿ ಜಗದೀಶ್ ಜೊತೆ ಫೈಟ್ ಮಾಡಿದ್ದ ಧನರಾಜ್ ಬಳಿಕ ನನಗೆ ಆಗ್ತಿಲ್ಲ ಬಿಗ್ ಬಾಸ್ ಎಂದು ಕನ್ ಫೆಷನ್ ರೂಂಗೆ ಹೋಗಿ ಅತ್ತಿದ್ದರು. ಆವಾಗಿನಿಂದ ಅವರ ಕಣ್ಣೀರು ಶುರುವಾಗಿತ್ತು. ಈ ವಾರ ಅವರನ್ನು ಕ್ಯಾಪ್ಟನ್ ಶಿಶಿರ್ ನಾಮಿನೇಟ್ ಮಾಡುತ್ತಿದ್ದಂತೇ ಮತ್ತೆ ಅತ್ತಿದ್ದಾರೆ.

ಧನರಾಜ್ ಕನ್ ಫ್ಯೂಷನ್ ನಲ್ಲಿದ್ದಾರೆ ಎನಿಸುತ್ತದೆ. ಅವರು ಸ್ಪರ್ಧಿಯಾಗಿ ಬಂದಿದ್ದಾರೋ, ಅತಿಥಿಯಾಗಿ ಬಂದಿದ್ದಾರೋ ಎಂಬ ಗೊಂದಲದಲ್ಲಿದ್ದಾರೆ ಎಂದು ಶಿಶಿರ್ ಕಾರಣ ನೀಡಿದ್ದು ಧನರಾಜ್ ಬೇಸರಕ್ಕೆ ಕಾರಣವಾಗಿದೆ. ನಾನೇ ಆನ್ ಫಿಟ್ ಏನೋ, ನನ್ನ ಬಗ್ಗೆ ನನಗೇ ನೆಗೆಟಿವ್ ಫೀಲಿಂಗ್ ಬರಲು ಶುರುವಾಗಿದೆ ಎಂದು ಧನರಾಜ್ ತಮ್ಮ ಆತ್ಮೀಯರ ಜೊತೆ ಕಣ್ಣೀರು ಹಾಕಿದ್ದಾರೆ.

ಪ್ರತೀ ಬಾರಿ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಏನಾದರೂ ಕಾಲೆಳೆದರೆ ನನ್ನ ಹೆಂಡ್ತಿ ನೋಡ್ತಾಳೆ ಸರ್ ಎಂದು ತಮಾಷೆಯಾಗಿ ಹೇಳುವ ಧನರಾಜ್ ಹೀಗೆ ಅಳುವುದನ್ನು ನೋಡಿ ನೆಟ್ಟಿಗರು ಇದನ್ನೂ ನಿಮ್ಮ ಹೆಂಡ್ತಿ ನೋಡಲ್ವಾ ಎಂದು ಕಾಲೆಳೆದಿದ್ದಾರೆ. ಅಲ್ಲದೆ, ಇಷ್ಟು ವೀಕ್ ಆಗಿದ್ದರೆ ನೀವು ನಿಜಕ್ಕೂ ಬಿಗ್ ಬಾಸ್ ಗೆ ಅನ್ ಫಿಟ್ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments