ಬಿಬಿಕೆ 10: ವೈವಾಹಿಕ ಜೀವನದ ಬಿರುಕಿನ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್

Webdunia
ಗುರುವಾರ, 30 ನವೆಂಬರ್ 2023 (10:10 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ವೈವಾಹಿಕ ಬದುಕಿನ ಬಗ್ಗೆ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು.

ಮದುವೆಯಾದರೂ ಬಿಗ್ ಬಾಸ್ ಮನೆಯಲ್ಲಿ ಅವರು ಮದುವೆ ಬಗ್ಗೆ ಮಾತನಾಡಿಲ್ಲ. ಹೆಂಡತಿಯನ್ನು ಬಿಟ್ಟಿದ್ದಾರೆ. ಹೆಂಡತಿಯ ಚಾರಿತ್ರ್ಯದ ಬಗ್ಗೆ ಸಂಶಯಪಡುತ್ತಾನೆ. ಮಗು ತನಗೆ ಹುಟ್ಟಿದ್ದೇ ಅಲ್ಲ ಎನ್ನುತ್ತಾನೆ ಎಂದೆಲ್ಲಾ ಅವರ ಮಾವ ಆರೋಪ ಮಾಡಿದ್ದರು.

ಆದರೆ ಇದೀಗ ವರ್ತೂರು ಸಂತೋಷ್ ಈ ಎಲ್ಲಾ ಆರೋಪಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಉತ್ತರ ಕೊಟ್ಟಿದ್ದಾರೆ. ತಮ್ಮ ವೈವಾಹಿಕ ಬದುಕು ಮುರಿದು ಬೀಳಲು ಕಾರಣವೇನು ಎಂದು ಸಂತೋಷ್ ಹೇಳಿದ್ದಾರೆ.

ಮನೆಯವರ ಮುಂದೆ ಮಾತನಾಡುವ ಸಂದರ್ಭದಲ್ಲಿ ‘ವರ್ತೂರು ಸಂತೋಷ್ ಒಳಗಡೆ ಏನಿದೆ ಎಂದು ಕೇಳಿದ್ದಕ್ಕೆ ಇವತ್ತು ಹೇಳ್ತಾ ಇದ್ದೇನೆ. ನನ್ನ ದೊಡ್ಡಪ್ಪನಿಗೆ ಹೇಳಿದ್ದೆ ನೀವು ಯಾರಿಗೆ ತಾಳಿ ಕಟ್ಟು ಅಂತೀರೋ ಅವರಿಗೆ ಕಟ್ಟುತ್ತೇನೆ ಎಂದಿದ್ದೆ. ನಾನು ಮಾತು ಕೊಟ್ಟುಬಿಟ್ಟು ಒಪ್ಪಿಕೊಂಡೆ. ಹಂಗೇ ಆಗ್ತಾ ಆಗ್ತಾ ನನ್ನ ತಾಯಿನ ಇಗ್ನೋರ್ ಮಾಡಕ್ಕೆ ಶುರುವಾಯ್ತು. ನಾನು ಸಂಪಾದನೆ ಮಾಡಿರೋ ಜನ ಇವರನ್ನೆಲ್ಲಾ ಬಿಟ್ಟು ಇವರ ಹಿಂದೆ ಹೋಗ್ಬೇಕು ಅಂದರೆ ಅದು ಸಾಧ‍್ಯ ಇಲ್ಲ. ನಾನು ಹೋಗ್ತೀನಿ ಅವರ ಮನೆ ಹತ್ರ. ನಾನು ಮಾತು ಪ್ರಕಾರ ಬಂದರೆ ನೀನು ರಾಣಿನೇ ಈವತ್ತಿಗೂ. ಬಾ ಅಂತ ಕರೀತಿನಿ. ಫಸ್ಟ್ ಗೇಟಿಂದ ಆಚೆ ಹೋಗು ಅಂತಾರೆ ನನ್ನ. ಆವತ್ತೇ ಮಾತು ಕೊಟ್ಟು ಬಂದಿದ್ದೀನಿ. ಈವತ್ತಿಗೂ ಆ ಮಾತಿಗೆ ನಿಂತಿದ್ದೀನಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments