Publish Date: Thu, 27 Apr 2017 (11:41 IST)
Updated Date: Thu, 27 Apr 2017 (11:44 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಅಮೃತವರ್ಷಿಣಿ ಐದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.
ರವಿ ಗರಣಿ ನಿರ್ದೇಶನದ ಅಮೃತವರ್ಷಿಣಿ ಹೆಂಗಳೆಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಂಸಾರಿಕ ಕತೆಯಾಗಿದ್ದು, ಸೊಸೆಯ ಪಾತ್ರಧಾರಿ ರಜನಿ ಮನೆ ಮಾತಾದರು.
‘ಆಗಷ್ಟೇ ನಾನು ಕೃಷ್ಣ ರುಕ್ಮಿಣಿ ಎನ್ನುವ ಧಾರವಾಹಿಯನ್ನು ಇದೇ ಚಾನೆಲ್ ನಲ್ಲಿ ಯಶಸ್ವಿಯಾಗಿ ಮುಗಿಸದ್ದೆ. ಹೀಗಾಗಿ ಚಾನೆಲ್ ನವರು ನನ್ನಲ್ಲಿ ಇನ್ನೊಂದು ಧಾರವಾಹಿ ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕಾಗಿ ನನಗೆ ಅವರು ಕೇವಲ ಒಂದು ತಿಂಗಳ ಕಾಲಾವಕಾಶ ಕೊಟ್ಟಿದ್ದರು.
ಅಷ್ಟು ಕಡಿಮೆ ಸಮಯದಲ್ಲಿ ತಯಾರಾದ ಈ ಧಾರವಾಹಿ ಇಂದು ಇಷ್ಟು ದೊಡ್ಡ ಯಶಸ್ಸು ಪಡೆದಿರುವುದು ನಿಜಕ್ಕೂ ನನಗೆ ನಂಬಲು ಕಷ್ಟವಾಗುತ್ತಿದೆ’ ಎಂದು ರವಿ ಗರಣಿ ಹೇಳುತ್ತಾರೆ. ಮೊನ್ನೆಯಷ್ಟೇ ತುಮಕೂರಿನಲ್ಲಿ ಧಾರವಾಹಿ ತಂಡ ಯಶಸ್ಸಿನ ಸಂಭ್ರಮ ಆಚರಿಸಿಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ