Select Your Language

Notifications

webdunia
webdunia
webdunia
webdunia

ಚಕ್ರವ್ಯೂಹದ ದ್ವಾರ ಬಾಗಿಲನ್ನು ಭೇಧಿಸಿದ ಧೋನಿ ಪಡೆ

ಚಕ್ರವ್ಯೂಹದ ದ್ವಾರ ಬಾಗಿಲನ್ನು ಭೇಧಿಸಿದ ಧೋನಿ ಪಡೆ
ಆಸ್ಟ್ರೇಲಿಯಾ/ಅಡಿಲೇಡ್ , ಭಾನುವಾರ, 15 ಫೆಬ್ರವರಿ 2015 (17:38 IST)
ವಿಶ್ವಕಪ್ ಏಕದಿನ ಪಂದ್ಯ-2015ರ ಟೂರ್ನಿಯ ಬಿ ಗುಂಪಿನಲ್ಲಿರುವ ಇಂಡಿಯಾ v/s ಪಾಕಿಸ್ತಾನ ತಂಡಗಳು ಇಂದು ಇಲ್ಲಿನ ಅಡಿಲೋಡ್‌ ಮೈದಾನದಲ್ಲಿ ಪರಸ್ಪರವಾಗಿ ಸೆಣಸಾಟಕ್ಕಿಳಿದಿದ್ದವು. ಈ ಕಾಳಗದಲ್ಲಿ ಭಾರತವು ತನ್ನ ಬದ್ಧ ವೈರಿಯಾಗಿದ್ದ ಪಾಕ್ ವಿರುದ್ಧ 76 ರನ್‌ಗಳ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಈ ಮೂಲಕ ವಿಶ್ವ ಕಪ್ ಎಂಬ ಭದ್ರವಾದ ಚಕ್ರವ್ಯೂಹದೊಳಗೆ ಮೊದಲ ಬಾಗಿಲನ್ನು ಭೇಧಿಸಿದೆ.  
 
ಈ ಮಹತ್ವದ ಪಂದ್ಯದಲ್ಲಿ ಭಾರತ ತಂಡವು 50 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಒಟ್ಟು 300 ರನ್ ಪೇರಿಸಿತ್ತು. ಈ ಮೂಲಕ ತನ್ನ ಎದುರಾಳಿ ಪಾಕಿಸ್ತಾನಕ್ಕೆ 301ರನ್‌ಗಳ ಟಾರ್ಗೆಟ್ ನೀಡಿತ್ತು. ಆದರೆ ಎದುರಾಳಿ ಪಾಕ್, ಇನ್ನೂ ಮೂರು ರನ್ ಉಳಿಕೆಯಾಗುರುವಾಗಲೇ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 224ರನ್‌ ದಾಖಲಿಸುವಲ್ಲಿ ಮಾತ್ರವೇ ಶಕ್ತವಾಯಿತು. ಈ ಮೂಲಕ 76 ರನ್‌ಗಳ ಕೊರತೆಯನ್ನು ಎದುರಿಸಿದ ಪಾಕ್, ಸೋಲನ್ನು ಒಪ್ಪಿಕೊಂಡಿತು. 
 
ಈ ವಿಸ್ವಕಪ್ ಪಂದಾವಳಿಯಲ್ಲಿ ಈ ಎರಡೂ ತಂಡಗಳಿಗೆ ಇದೇ ಮೊದಲ ಆಟವಾಗಿದ್ದು, ಈ ಎರಡೂ ತಂಡಗಳ ಆಟ ಕ್ರಿಕೆಟ್ ಪ್ರಿಯರಲ್ಲಿ ಉತ್ಸಾಹದ ಚಿಲುಮೆಯನ್ನು ಹುಟ್ಟುಹಾಕಿತ್ತು. ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಉಪ ನಾಯಕ ವ್ಹಿರಾಟ್ ಕೊಹ್ಲಿ ಅವರು 126 ಎಸೆತಗಳಲ್ಲಿ 107 ರನ್ ದಾಖಲಿಸುವ ಮೂಲಕ ಶತಕ ಸಿಡಿಸಿ ತಂಡದ ಅದ್ದೂರಿ ಜಯಕ್ಕೆ ಹಾದಿ ಮಾಡಿಕೊಟ್ಟರು. ಅವರ ಆಕರ್ಷಕ ಆಟವು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಮಂದಹಾಸ ಮೂಡಿಸಿತ್ತು. ಇದು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅವರು ದಾಖಲಿಸಿದ 22ನೇ ಶತಕವಾಗಿದೆ.
 
ಇನ್ನು ತಂಡದ ಮತ್ತೋರ್ವ ಆಟಗಾರ ಸುರೇಶ್ ರೈನಾ ಕೂಡ ಉತ್ತಮ ಪ್ರದರ್ಶನವನ್ನು ನೀಡಿದ್ದು, ಕೇವಲ 56 ಎಸೆತಗಳಲ್ಲಿ 74ರನ್ ಕಲೆಹಾಕಿ ಆಕರ್ಷಕ ಅರ್ಧ ಶತಕ ಸಿಡಿಸಿದರು. ಈ ಮೂಲಕ ಇಂದನ ಪಂದ್ಯಾವಳಿಯಲ್ಲಿ ರೈನಾ ಕೂಡ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. 
 
ಆರಂಭದಲ್ಲಿಯೇ ಬ್ಯಾಟನ್ನು ಕೈಗೆತ್ತಿಕೊಂಡ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ, ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡಿ ಗೆಲುವಿನ ಮುನ್ನುಡಿ ಬರೆದರು. ರೋಹಿತ್ ಶರ್ಮಾ 20 ಎಸೆತಗಳಿಗೆ 15ರನ್ ಗಳಿಸಿದರೆ, ಶಿಖರ್ ಧವನ್ 76 ಕ್ಕೆ 73ರನ್ ಗಳಿಸಿದರು. ಅಂತೆಯೇ ತಂಡದ ನಾಯಕ ಧೋನಿ 13ಕ್ಕೆ18, ರವೀಂದ್ರ ಜಡೇಜಾ 5ಕ್ಕೆ3, ಅಜಿಂಕ್ಯಾ ರಹಾನೆ ಶೂನ್ಯ ದಾಖಲಿಸಿದರು.
 
ಇನ್ನು ಪಂದ್ಯದ ಮುಕ್ತಾಯ ಹಂತದಲ್ಲಿ ಬ್ಯಾಟ್ ಹಿಡಿದ ತಂಡದ ಮೊಹಮ್ಮದ್ ಶಮಿ 3 ಎಸೆತಕ್ಕೆ 3 ರನ್ ದಾಖಲಿಸಿದರೆ ರವಿಚಂದ್ರನ್ ಅಶ್ವಿನ್ 1 ಎಸೆತಕ್ಕೆ 1 ರನ್ ಗಳಿಸಿದರು. ಓವರ್ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೆವಿಲಿಯನ್‌ಗೆ ವಾಪಾಸಾದರು.  
 
ಇನ್ನು ಎದುರಾಳಿ ಪಾಕ್ ತಂಡದಲ್ಲಿ ನಾಯಕ ಮಿಸ್ಬಾ ಉಲ್ ಹಕ್ 84 ಎಸೆತಗಳಿಗೆ 76 ರನ್ ಸಿಡಿಸಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅವರನ್ನು ಹೊರತು ಪಡಿಸಿ ಬೇರೆ ಯರೂ ಕೂಡ ಅರ್ಧ ಶತಕದಿಂದ ಮುಂದೆ ಸಾಗಲಿಲ್ಲ. 
 
ಪಾಕ್ ತಂಡದ ಇತರೆ ಆಟಗಾರರಾದ ಅಹ್ಮದ್ ಶೇಹ್ಜಾದ್ 73ಕ್ಕೆ 47, ಯೂನಿಸ್ ಖಾನ್ 10ಕ್ಕೆ 6, ಹ್ಯಾರಿಸ್ ಸೋಹೈಲ್ 48ಕ್ಕೆ 36, ಶಾಹಿದ್ ಮಸೂದ್ ಹಾಗೂ ಉಮರ್ ಅಕ್ಮಲ್ ಶೂನ್ಯ, ಶಾಹಿದ್ ಅಫ್ರಿದಿ 23ಕ್ಕೆ 23, ವಹಾಬ್ ರೈಜ್ 2ಕ್ಕೆ4, ಯಾಸಿರ್ ಷಾ 23ಕ್ಕೆ 13, ಸೊಹೈಲ್ ಖಾನ್ 7ಕ್ಕೆ 10 ರನ್ ಪೇರಿಸಿದರು. 
 
ಹೀಗೆ ಇನ್ನೂ ಮೂರು ರನ್‌ಗಳು ಉಳಿದಿರುವಾಗಲೇ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ಎದುರಾಳಿ ಪಾಕಿಸ್ತಾನ, 76 ರನ್‌ಗಳ ಕೊರತೆಯನ್ನೆದುರಿಸಿ ಅಂಗಳದಿಂದ ಹೊರ ನಡೆದರು. 

Share this Story:

Follow Webdunia kannada