Select Your Language

Notifications

webdunia
webdunia
webdunia
webdunia

ಟ್ವೆಂಟಿ-20ಯಲ್ಲಿ ಆಫ್ರಿದಿಯದ್ದಿದು ಚೊಚ್ಚಲ ಅರ್ಧಶತಕ

ಟ್ವೆಂಟಿ-20ಯಲ್ಲಿ ಆಫ್ರಿದಿಯದ್ದಿದು ಚೊಚ್ಚಲ ಅರ್ಧಶತಕ
ನಾಟಿಂಗ್‌ಹ್ಯಾಮ್ , ಶುಕ್ರವಾರ, 19 ಜೂನ್ 2009 (15:34 IST)
ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಮಣಿಸುವ ಮೂಲಕ ಪಾಕಿಸ್ತಾನ ಟ್ವೆಂಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಪಂದ್ಯದಲ್ಲಿನ ಕೆಲವು ಪ್ರಮುಖ ಅಂಕಿ ಅಂಶಗಳಿವು.

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಮಾಡಿದ ಮೊತ್ತ (149/4) ಗರಿಷ್ಠವೆಂದು ದಾಖಲಾಗಿದೆ.

- ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಕೂಡ ಗರಿಷ್ಠ ಮೊತ್ತ (142/5) ಪೇರಿಸಿದ ದಾಖಲೆ ನಿರ್ಮಿಸಿತು.

- ಒಟ್ಟಾರೆ ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಪಾಕಿಸ್ತಾನವು ಕಳೆದ ಪಂದ್ಯದಲ್ಲಿ ದಾಖಲಿಸಿದ ಏಳು ವಿಕೆಟುಗಳ ಜಯವು ಅದರ ಮಟ್ಟಿಗೆ ಅತೀ ಕಡಮೆ ಅಂತರದ ವಿಜಯ.

- ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಎರಡನೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾಕ್ಕಿದು ಮೊದಲನೇ ಸೋಲು. 2007ರ ಸೆಪ್ಟೆಂಬರ್ 20ರಂದು ಡರ್ಬಾನ್‌ನಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 37 ರನ್ನುಗಳ ಅಂತರದಿಂದ ಸೋಲುಂಡಿತ್ತು.

- ಕಳೆದ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ 64 ರನ್ ಗಳಿಸುವ ಮೂಲಕ ಜಾಕ್ವಾಸ್ ಕ್ಯಾಲಿಸ್ ಈ ಟೂರ್ನಮೆಂಟ್‌ನಲ್ಲಿ ಅತ್ಯಧಿಕ ರನ್ ದಾಖಲಿಸಿದ ದಾಂಡಿಗ ಎಂಬ ದಾಖಲೆ ಮಾಡಿದ್ದಾರೆ. ಅವರು ಐದು ಪಂದ್ಯಗಳಲ್ಲಿ 59.50ರ ಸರಾಸರಿಯಲ್ಲಿ ಎರಡು ಅರ್ಧಶತಕಗಳ ಸಹಿತ 238 ರನ್ ದಾಖಲಿಸಿದ್ದು, ತಿಲಕರತ್ನೆ ದಿಲ್‌ಶಾನ್‌ರ 221ರ ಮೊತ್ತವನ್ನು ಮೀರಿ ನಿಂತಿದ್ದಾರೆ.

- ಕ್ಯಾಲಿಸ್‌‌ರ ಹೆಸರಿನಲ್ಲಿ ಈ ಪಂದ್ಯಕ್ಕಿಂತ ಮೊದಲು ಗರಿಷ್ಠ ಮೊತ್ತವೆಂದು ದಾಖಲಾಗಿದ್ದುದು 57 ರನ್. ಇಂಗ್ಲೆಂಡ್ ವಿರುದ್ಧ ಟ್ರೆಂಟ್‌ ಬ್ರಿಡ್ಜ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 49 ಎಸೆತಗಳಿಂದ ಈ ಅರ್ಧಶತಕ ಮಾಡಿದ್ದರು.

- ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಜೀನ್ ಪೌಲ್ ಡ್ಯುಮಿನಿ ತನ್ನ ಅತ್ಯಧಿಕ ಮೊತ್ತವನ್ನು (39 ಎಸೆತಗಳಿಂದ 44 ರನ್) ದಾಖಲಿಸಿದ್ದಾರೆ. ಈ ಹಿಂದೆ ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 28 ಎಸೆತಗಳಿಂದ 36 ರನ್ ಮಾಡಿದ್ದೇ ಗರಿಷ್ಠವೆನಿಸಿತ್ತು.

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಶಾಹಿದ್ ಆಫ್ರಿದಿ ನಾಲ್ಕನೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಆರು ಪ್ರಶಸ್ತಿ ಗೆದ್ದಿರುವ ಸನತ್ ಜಯಸೂರ್ಯ ಒಂದನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ಆಫ್ರಿದಿಯವರದ್ದು.

- ತನ್ನ ಮೊತ್ತ ಮೊದಲ ಟ್ವೆಂಟಿ-20 ಅರ್ಧಶತಕ (34 ಎಸೆತಗಳಿಂದ 51 ರನ್) ದಾಖಲಿಸುವುದರೊಂದಿಗೆ ಶಾಹಿದ್ ಆಫ್ರಿದಿ, ಪಾಕಿಸ್ತಾನಿ ಅಲ್-ರೌಂಡರ್ ಆಟಗಾರನೊಬ್ಬ ಅರ್ಧಶತಕದೊಂದಿಗೆ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು.

- 23 ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳಿಂದ 29.58ರ ಸರಾಸರಿಯಲ್ಲಿ 503 ರನ್ ದಾಖಲಿಸಿರುವ ಶೋಯಿಬ್ ಮಲಿಕ್ (ಕಳೆದ ಪಂದ್ಯದಲ್ಲಿ 34 ರನ್) 500 ರನ್ ಪೂರೈಸಿದ ಪಾಕಿಸ್ತಾನದ ಎರಡನೇ ಆಟಗಾರ. ಇಲ್ಲಿ ಮೊದಲ ಸ್ಥಾನ 21 ಪಂದ್ಯಗಳಿಂದ 45.81ರ ಸರಾಸರಿಯಲ್ಲಿ 504 ರನ್ ಮಾಡಿರುವ ಮಿಸ್ಬಾ-ಉಲ್-ಹಕ್‌ರದ್ದು.

- ಆಫ್ರಿದಿ ಮತ್ತು ಮಲಿಕ್ ಮೂರನೇ ವಿಕೆಟಿಗೆ 67 ರನ್‌ಗಳ ಜತೆಯಾಟ ನೀಡುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಯಾವುದೇ ವಿಕೆಟಿಗೆ ನೀಡಿದ ಗರಿಷ್ಠ ಪಾಲುದಾರಿಕೆ ಎಂಬ ದಾಖಲೆ ನಿರ್ಮಾಣವಾಗಿದೆ. ಈ ಹಿಂದೆ ಫೆಬ್ರವರಿ 2, 2007ರಲ್ಲಿ ಕಮ್ರಾನ್ ಅಕ್ಮಲ್ ಮತ್ತು ಮೊಹಮ್ಮದ್ ಹಫೀಜ್ ಜೋಹಾನ್ಸ್‌ಬರ್ಗ್‌ನಲ್ಲಿ ಎರಡನೇ ವಿಕೆಟಿಗೆ 47 ರನ್ ಜತೆಯಾಟ ನೀಡಿದ್ದೇ ಗರಿಷ್ಠವಾಗಿತ್ತು.

Share this Story:

Follow Webdunia kannada