ಬೇಕಾಗುವ ಸಾಮಗ್ರಿ- ಒಂದು ಕಪ್ ಹೆಸರುಬೇಳೆ, ಒಂದು ಕಪ್ ಸಕ್ಕರೆ, ಎರಡು ಚಮಚ ತುಪ್ಪ, 200 ಎಂಎಲ್ ಹಾಲು, ಕಾಲು ಚಮಚ ಏಲಕ್ಕಿ ಪುಡಿ, ಕಾಲು ಚಮಚ ಜಾಯಿಕಾಯಿ ಪುಡಿ, ಕಾಲು ಚಮಚ ಕೇಸರಿ, ಸ್ವಲ್ಪ ಗೋಡಂಬಿ, ಬಾದಾಮಿ, ಪಿಸ್ತಾ.
ಮಾಡುವ ವಿಧಾನ- ಹೆಸರು ಬೇಳೆಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಈ ರುಬ್ಬಿದ ಹೆಸರುಬೇಳೆಯನ್ನು ಹಾಕಿ. ಪಸೆ ಆರುವವರವರೆಗೆ ಫ್ರೈ ಮಾಡಿ. ತುಸು ಪಿಂಕ್ ಬಣ್ಣಕ್ಕೆ ಹೆಸರು ಬೇಳೆ ತಿರುಗಿದ ಮೇಲೆ ಸಕ್ಕರೆ, ಹಾಲು ಸೇರಿಸಿ ತಿರುವುತ್ತಾ ಇರಿ. ನಂತರ, ಏಲಕ್ಕಿ, ಜಾಯಿಕಾಯಿ, ಗೋಡಂಬಿ, ಬಾದಾಮಿ ಪಿಸ್ತಾಗಳನ್ನು ಹಾಕಿ. ತುಪ್ಪ ಸವರಿತ ತಟ್ಟೆಯಲ್ಲಿ ಹರವಿ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.