ಬೇಕಾಗುವ ಸಾಮಗ್ರಿ- ಒಂದು ಕಪ್ ಹೆಸರು ಬೇಳೆ, ಒಂದು ಕಪ್ ಸಕ್ಕರೆ, ಒಂದು ಕಪ್ ತುಪ್ಪ, ಒಂದು ಕಪ್ ಗಟ್ಟಿ ಹಾಲು, ಒಂದು ದೊಡ್ಡ ಚಮಚ ಕಡಲೆ ಹಿಟ್ಟು (ಬೇಸನ್), ಒಂದು ಕಪ್ ನೀರು, ಬಾದಾಮಿ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಸ್ವಲ್ಪ.
ಮಾಡುವ ವಿಧಾನ- ಹೆಸರು ಬೇಳೆಯನ್ನು ನಾಲ್ಕೈದು ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಚೆನ್ನಾಗಿ ರುಬ್ಬಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಪಾಕವನ್ನು ಮಾಡಿ ಅದಕ್ಕೆ ಕೇಸರಿ ದಳಗಳನ್ನ ಉದುರಿಸಿ ಇಡಿ. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಲು ಇಟ್ಟು ಅದಕ್ಕೆ ಹೆಸರು ಬೇಳೆಯ ರುಬ್ಬಿದ ಹಿಟ್ಟನ್ನು ಹಾಕಿ. ಅದಕ್ಕೆ ಒಂದು ಚಮಚ ಕಡಲೆ ಹಿಟ್ಟು ಸೇರಿಸಿ. ತಿರುವುತ್ತಾ ಇರಿ. ಪಾತ್ರೆಯ ತಳದಿಂದ ಈ ಹಿಟ್ಟು ಬೇರೆಯಾಗುವಷ್ಟು ಕಾದ ಮೇಲೆ ಅದಕ್ಕೆ ಗಟ್ಟಿ ಹಾಲು ಸೇರಿಸಿ ತಿರುಗಿಸಿ. ಅದು ಒಣಗುತ್ತಾ ಬಂದ ಮೇಲೆ ಸ್ವಲ್ಪ ಸ್ವಲ್ಪವೇ ಮಾಡಿಟ್ಟ ಸಕ್ಕರೆ ಪಾಕ ಸೇರಿಸುತ್ತಾ ಬನ್ನಿ. ನಂತರ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ. ತುಪ್ಪ ಸವರಿದ ತಟ್ಟಗೆ ಹರವಿ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.