ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಹಾಲಿನ ಪುಡಿ, ಮುಕ್ಕಾಲು ಕಪ್ ತುಪ್ಪ, ಎರಡುವರೆ ಕಪ್ ಸಕ್ಕರೆ.
ಮಾಡುವ ವಿಧಾನ: ಹಾಲಿನಪುಡಿಯನ್ನು ತುಪ್ಪದ ಜತೆಗೆ ಹುರಿದು ಒಲೆಯಿಂದ ಕೆಳಗಿಳಿಸಿ. ಸಕ್ಕರೆ ಪಾಕ ಮಾಡಿ ಇಟ್ಟುಕೊಳ್ಳಿ. ಅದಕ್ಕೆ ಹಾಲಿನ ಪುಡಿಯನ್ನು ಸೇರಿಸಿ ಅದನ್ನು ಚೆನ್ನಾಗಿ ಕಲಸಿ ಒಲೆಯ ಮೇಲೆ ಹದ ಉರಿಯಲ್ಲಿ ಇಡಿ. ಸ್ವಲ್ಪಸ್ವಲ್ಪವೇ ತುಪ್ಪ ಸೇರಿಸುತ್ತಿರಿ. ಅದು ಹಲ್ವಾದಂತೆ ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಅದನ್ನು ಹರವಿ. ನಂತರ ನಿಮಗೆ ಬೇಕಾದ ಆಕಾರದಲ್ಲಿ ಚೆಂದನೆಯ ತುಂಡುಗಳಾಗಿ ಕತ್ತರಿಸಿ. ಹಾಲಿನ ಬರ್ಫಿ ಸಿದ್ಧ.