ಬೇಕಾಗುವ ಸಾಮಗ್ರಿ: ಎರಡು ಲೀಟರ್ ಗಟ್ಟಿ ಹಾಲು, ಕಾಲು ಚಮಚ ಸ್ಪಟಿಕ, ಅರ್ಧ ಕಪ್ ಸಕ್ಕರೆ, ಎರಡು ಚಮಚ ತುಪ್ಪ.
ಮಾಡುವ ವಿಧಾನ: ದಪ್ಪತಳದ ಪಾತ್ರೆಗೆ ಹಾಲು ಹಾಕಿ ಕುದಿಸಿ. ಕುದಿಯಲು ಶುರುವಾದ ಮೇಲೆ ಅದಕ್ಕೆ ಸ್ಫಟಿಕ ಹಾಕಿ ಕಲಸಿ. ಸಕ್ಕರೆ ಸೇರಿಸಿ ಕೈಯಾಡಿಸುತ್ತಾ ದೊಡ್ಡ ಉರಿಯಲ್ಲಿ ಕುದಿಸಿ. ಹಾಲು ಒಡೆದಂತೆ ಕಂಡರೂ ಕುದಿಸುವುದನ್ನು ಮುಂದುವರಿಸಿ. ತುಪ್ಪ ಸೇರಿಸಿ ಹದ ಉರಿಯಲ್ಲಿಟ್ಟು ತಿರುವುತ್ತಾ ಕುದಿಸಿ. ನೀರು ಆರಿ ದಪ್ಪಗಾದ ಮೇಲೆ ತುಪ್ಪ ಹಚ್ಚಿದ ತಟ್ಟೆಗೆ ಬಿಸಿಯಾಗಿರುವಾಗಲೇ ಸುರಿಯಿರಿ. ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ ತಣಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಸವಿಯಿರಿ.