Article Sweets Recipes In Kannada %e0%b2%b9%e0%b2%b2%e0%b3%8d%e0%b2%b5%e0%b2%be %e0%b2%aa%e0%b3%82%e0%b2%b0%e0%b2%bf 109072400074_1.htm

Select Your Language

Notifications

webdunia
webdunia
webdunia
webdunia

ಹಲ್ವಾ ಪೂರಿ

ಹಲ್ವಾ ಪೂರಿ
ಬೇಕಾಗುವ ಸಾಮಗ್ರಿ- ಒಂದು ಕಪ್ ರವೆ (ಸಜ್ಜಿಗೆ), ಒಂದು ಕಪ್ ನೀರು, ಒಂದು ಕಪ್ ಸಕ್ಕರೆ, ಒಂದು ಕಪ್ ಗೋಧಿ ಹಿಟ್ಟು, ಸ್ವಲ್ಪ ಎಣ್ಣೆ.

ಮಾಡುವ ವಿಧಾನ- ಗೋಧಿ ಹಿಟ್ಟಿಗೆ ನೀರು ಸೇರಿಸಿ ಹೆಚ್ಚಾಗಿ ಕಲಸಿ. ಈ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ನಾದಿ. ನಾದಿದ ಹಿಟ್ಟನ್ನು ಅರ್ಧ ಗಂಟೆ ಕಾಲ ಹಾಗೇ ಇಡಿ. ಒಂದು ಕಪ್ ನೀರಿಗೆ ಒಂದು ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ. ಕುದಿಸುತ್ತಿರುವಾಗಲೇ ರವೆಯನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಚೆನ್ನಾಗಿ ತಿರುವುತ್ತಲೇ ಇರಿ. ಇದು ಹಲ್ವಾದಂತೆ ಸ್ವಲ್ಪ ಗಟ್ಟಿಯಾಗುತ್ತಾ ಬಂದ ನಂತರ ಅದನ್ನು ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಾದಿದ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ ಅದನ್ನು ಪೂರಿಯಂತೆ ಲಟ್ಟಿಸಿ ಅಥವಾ ಕೈಯಿಂದ ತಟ್ಟಿ. ಈ ಪೂರಿಯೊಳಗೆ ರವೆ ಹಲ್ವಾವನ್ನು ಸೇರಿಸಿ ಬದಿಗಳ್ನನು ಉಂಡೆಯಾಗಿ ಸೇರಿಸಿ. ಅದನ್ನ ಮತ್ತೆ ತಟ್ಟಿ ಸಣ್ಣ ಪೂರಿ ಮಾಡಿ. ಈ ಪೂರಿಯ್ನನು ಎಣ್ಣೆಗಲ್ಲಿ ಚೆನ್ನಾಗಿ ಕರಿಯಿರಿ. ಹಲ್ವಾ ಪೂರಿ ಸಿದ್ಧ.

Share this Story:

Follow Webdunia kannada