ಪಾಕ ವಿಧಾನ: ಮೊದಲಿಗೆ ಹಲಸಿನ ತೊಳೆಗಳನ್ನು ಸಣ್ಣಗೆ ಹೆಚ್ಚಿ ಬೇಯಿಸಿ. ಇದನ್ನು ರುಬ್ಬಿದ ಬಳಿಕ ದೊಡ್ಡ ಕಣ್ಣಿನ ಜರಡಿಯಲ್ಲಿ ಗಾಳಿಸಿ ರಸ ತೆಗೆದಿಟ್ಟುಕೊಳ್ಳಿ. ನುಣ್ಣಗೆ ರುಬ್ಬಿದ ತೆಂಗಿನ ಕಾಯಿ ಅಥವಾ ತೆಂಗಿನ ಕಾಯಿ ಹಾಲನ್ನು ಬಿಸಿಗಿಟ್ಟು ಬೆಲ್ಲ ಹಾಕಿ ಕಲಕಿ. ಬಳಿಕ ರುಬ್ಬಿದ ಹಲಸಿನ ತೊಳೆ ರಸ ಸೇರಿಸಿ. ಗಂಟಾಗದಂತೆ ತಿರುವುತ್ತಿರಿ. ಕುದಿ ಬಂದಾಗ ಕೆಳಗಿರಿಸಿ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ.