ಬೇಕಾಗುವ ಸಾಮಗ್ರಿ- ರವೆ 1 ಲೋಟ, ತುಪ್ಪ 1 ಲೋಟ, ಸಕ್ಕರೆ ಒಂದುವರೆ ಲೋಟ, ಹಲಸಿನ ಹಣ್ಣು ಏಳರಿಂದ ಎಂಟು, ಸ್ವಲ್ಪ ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ.
ಮಾಡುವ ವಿಧಾನ- ಮೊದಲು ತುಪ್ಪದಲ್ಲಿ ರವೆಯನ್ನು ಹುರಿದಿಡಿ. ಗೋಡಂಬಿ, ದ್ರಾಕ್ಷಿಯನ್ನೂ ತುಪ್ಪದಲ್ಲಿ ಹುರಿದಿಡಿ. ಹಲಸಿನ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ರವೆ ಹಾಗೂ ರವೆಯ ಎರಡರಷ್ಟು ನೀರು ಹಾಗೂ ಹಾಲನ್ನು ಒಂದು ಪಾತ್ರೆಯಲ್ಲಿ ತೆಗದುಕೊಂಡು ಕುದಿಯಲು ಇಡಿ. ನಂತರ ಇದಕ್ಕೆ ಹಲಸಿನ ಹಣ್ಣನ್ನು ಹಾಕಿ. ರವೆ ಗಂಟಾಗದಂತೆ ತಿರುವುತ್ತಲೇ ಇರಿ. ಬೆಂದಾದ ನಂತರ ಸಕ್ಕರೆ ಸೇರಿಸಿ ತಿರುವಿ. ನಂತರ ತುಪ್ಪ, ಏಲಕ್ಕಿ ಪುಡಿ ಸೇರಿಸಿ ತಿರುವಿ. ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಸೇರಿಸಿ. ಹಲಸಿನ ಹಣ್ಣಿನ ಶೀರ ರೆಡಿ.