ಬೇಕಾಗುವ ಸಾಮಗ್ರಿ- ಹಲಸಿನ ಹಣ್ಣಿನ ತೊಳೆ 15, ತುಪ್ಪ ಒಂದು ಕಪ್, ಬೆಲ್ಲ ತುರಿ ಅರ್ಧ ಕಪ್, ತೆಂಗಿನ ಕಾಯಿ ಅರ್ಧ ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಚೂರು.
ಮಾಡುವ ವಿಧಾನ- ತೆಂಗಿನ ಕಾಯಿ ತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಒಂದು ತೆಳ್ಳನೆ ಬಟ್ಟೆಯಲ್ಲಿ ಹಿಂಡಿ ಹಾಲು ತೆಗೆಯಿರಿ. ಮತ್ತೊಮ್ಮೆ. ಹೀಗೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ ಕಾಯಿಹಾಲು ತೆಗೆದಿಡಿ. ಹಲಸಿನ ಹಣ್ಣಿನ ತೊಳೆಯ ಬೀಜಗಳನ್ನು ಬೇರ್ಪಡಿಸಿ ಸಣ್ಣದಾಗಿ ಕತ್ತರಿಸಿ. ಪಾತ್ರೆಯಲ್ಲಿ ಸ್ವಲ್ಪ ನೀರು ಕುದಿಯಲು ಬಿಡಿ. ಕುದಿಯತೊಡಗಿದಾಗ ಅದಕ್ಕೆ ಹಲಸಿನ ತೊಳೆ ಸೇರಿಸಿ. ಅದು ಮೆತ್ತಗಾದಾಗ ಬೆಲ್ಲದ ತುರಿ, ಕಾಯಿ ಹಾಲು ಸೇರಿಸಿ. ಉರಿ ಕಡಿಮೆ ಮಾಡಿ. ಇನ್ನೊಂದೆಡೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಡಿ. ಬೆಲ್ಲ ಕರಗಿದ ಮೇಲೆ ತುಪ್ಪ ಸೇರಿಸಿ. ಹುರಿದ ಗೋಡಂಬಿ ಸೇರಿಸಿ. ಹಲಸಿನ ಹಣ್ಣಿನ ಪಾಯಸ ರೆಡಿ.