Article Sweets Recipes In Kannada %e0%b2%b9%e0%b2%b2%e0%b2%b8%e0%b2%bf%e0%b2%a8 %e0%b2%aa%e0%b2%be%e0%b2%af%e0%b2%b8 109031400068_1.htm

Select Your Language

Notifications

webdunia
webdunia
webdunia
webdunia

ಹಲಸಿನ ಪಾಯಸ

ಹಲಸಿನ ಪಾಯಸ
ಬೇಕಾಗುವ ಸಾಮಗ್ರಿಗಳು:

ಹಲಸಿನ ತೋಳೆ 10
ಬೆಲ್ಲ 1 ಉಂಡೆ
ತೆಂಗಿನ ಕಾಯಿ 1/2
ಏಲಕ್ಕಿ ಪುಡಿ 3ಚಿಟಿಕೆ
ತುಪ್ಪ 50ಗ್ರಾಮ್‌

ಪಾಕ ವಿಧಾನ:

ಮೊದಲಿಗೆ ಹಲಸಿನ ತೊಳೆಗಳನ್ನು ಸಣ್ಣಗೆ ಹೆಚ್ಚಿ ಬೇಯಿಸಿ. ಇದನ್ನು ರುಬ್ಬಿದ ಬಳಿಕ ದೊಡ್ಡ ಕಣ್ಣಿನ ಜರಡಿಯಲ್ಲಿ ಗಾಳಿಸಿ ರಸ ತೆಗೆದಿಟ್ಟುಕೊಳ್ಳಿ. ನುಣ್ಣಗೆ ರುಬ್ಬಿದ ತೆಂಗಿನ ಕಾಯಿ ಅಥವಾ ತೆಂಗಿನ ಕಾಯಿ ಹಾಲನ್ನು ಬಿಸಿಗಿಟ್ಟು ಬೆಲ್ಲ ಹಾಕಿ ಕಲಕಿ. ಬಳಿಕ ರುಬ್ಬಿದ ಹಲಸಿನ ತೊಳೆ ರಸ ಸೇರಿಸಿ. ಗಂಟಾಗದಂತೆ ತಿರುವುತ್ತಿರಿ. ಕುದಿ ಬಂದಾಗ ಕೆಳಗಿರಿಸಿ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ.

Share this Story:

Follow Webdunia kannada