ಕಡಲೇಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ . ನಂತರ ಅದರ ನೀರನ್ನು ಸೋಸಿ ಚೆನ್ನಾಗಿ ಬೇಯಿಸಿ. ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಗಸಗಸೆಯನ್ನು ಹುರಿದು ಪುಡಿಮಾಡಿ. ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪವನ್ನು ಬಿಸಿಮಾಡಿ ಬೇಯಿಸಿದ ಕಡಲೇಬೇಳೆಯನ್ನು ಹಾಕಿ ಚೆನ್ನಾಗಿ ಕಲಸುತ್ತಿರಿ. ಸ್ವಲ್ಪ ಸಮಯದ ನಂತರ ಇದಕ್ಕೆ ಪುಡಿಮಾಡಿದ ಬೆಲ್ಲ, ಗಸಗಸೆ ಮತ್ತು ಕೊಬ್ಬರಿತುರಿಯನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಸಿ. ಕೊನೆಯಲ್ಲಿ ಹಾಲನ್ನು ಈ ಮಿಶ್ರಣಕ್ಕೆ ಸೇರಿಸಿ ಕಲಸುತ್ತಿರಿ. ಅದು ಗಟ್ಟಿಯಾದ ನಂತರ ಏಲಕ್ಕಿಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ.