ಬೇಕಾಗುವ ಸಾಮಗ್ರಿ- ಗೋಧಿಹಿಟ್ಟು ಒಂದು ಕಪ್, ತುಪ್ಪ ಅಥವಾ ಬೆಣ್ಣೆ ಕಾಲು ಕಪ್, ಏಲಕ್ಕಿ ಪುಡಿ ಅರ್ಧ ಚಮಚ, ಜೇನುತಪ್ಪ ಅರ್ಧ ಕಪ್, ಕರಿಯಲು ಎಣ್ಣೆ.
ಮಾಡುವ ವಿಧಾನ- ಗೋಧಿಹಿಟ್ಟಿಗೆ ತುಪ್ಪ ಹಾಕಿ ಏಲಕ್ಕಿ ಪುಡಿ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಮುಚ್ಚಿಡಿ. ದಪ್ಪನಾಗಿ ಪೂರಿಯಂತೆ ಲಟ್ಟಿಸಿ ಟೇಪಿನಂತೆ ಉದ್ದವಾಗಿ ಕಟ್ ಮಾಡಿ. ಒಂದು ಚಿಕ್ಕ ಸ್ಟೀಲ್ ಮುಚ್ಚಳದಿಂದ ಚಂದ್ರನ ಆಕಾರದಲ್ಲಿ ಕಟ್ ಮಾಡಿ ಎಲ್ಲವನ್ನೂ ಕಾದ ಎಣ್ಣೆಯಲ್ಲಿ ಕರಿದು ಜೇನುತುಪ್ಪದಲ್ಲಿ ಅದ್ದಿ ತಟ್ಟೆಗಳಲ್ಲಿ ಅಂದವಾಗಿ ಜೋಡಿಸಿದರೆ ಹನಿಮೂನ್ ಸಿಹಿ ಆಕರ್ಷಕವಾಗಿ ಕಾಣುತ್ತದೆ.