ಬೇಕಾಗುವ ಸಾಮಗ್ರಿ- ಅವಲಕ್ಕಿ ಒಂದು ಲೋಟ, ಸಕ್ಕರೆ ಪುಡಿ ಅರ್ಧ ಲೋಟ, ಕಡಲೆ ಬೀಜ, ಎಳ್ಳು, ಗಸಗಸೆ, ಗೋಡಂಬಿ, ಬಾದಾಮಿ, ಖರ್ಜೂರ, ದ್ರಾಕ್ಷಿ, ಎಲ್ಲವೂ ಸೇರಿ ಒಂದು ಬಟ್ಟಲು, ಏಲಕ್ಕಿ ಪುಡಿ 1 ಚಮಚ, ಬೆಲ್ಲದ ಪುಡಿ 2 ಚಮಚ.
ಮಾಡುವ ವಿಧಾನ- ಅವಲಕ್ಕಿ ಪುಡಿ ಮಾಡಿ ಅರ್ಧ ಲೋಟ ಸಕ್ಕರೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಅಗತ್ಯವಿದ್ದಷ್ಟೆ ನೀರು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಕಡಲೆಬೀಜ ಮತ್ತು ಉಳಿದ ಡ್ರೈ ಫ್ರುಟ್ಸ್ ಸೇರಿಸಿ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಬೆಲ್ಲದ ಪುಡಿಯೊಂದಿಗೆ ಮುದ್ದೆಯಂತೆ ಕಲಸಿ ಸಣ್ಣ ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನಾಗಿ ಮಾಡಿ. ಈಗ ಅವಲಕ್ಕಿ ಮಿಶ್ರಣವನ್ನು ನಿಂಬೆ ಗಾತ್ರ ತೆಗೆದುಕೊಂಡು ತುಪ್ಪದ ಕೈ ಮಾಡಿಕೊಂಡು ಬಟ್ಟಲಿನಂತೆ ಮಾಡಿ ಅದರೊಳಗೆ ಡ್ರೈಫ್ರುಟ್ಸ್ ಮಿಶ್ರಣ ಇಟ್ಟು ಮೊಟ್ಟೆ ಆಕಾರ ಬರುವಂತೆ ಮಾಡಿ ತಟ್ಟೆಯಲ್ಲಿಡಿ. ಸ್ವೀಟ್ ಎಗ್ ರೆಡಿ.