ಬೇಕಾಗುವ ಸಾಮಗ್ರಿ: 3- 4 ಸ್ಟ್ರಾಬೆರ್ರಿ ಹಣ್ಣು, ಒಂದು ಲೋಟ ಹಾಲು, ಸಕ್ಕರೆ.
ಮಾಡುವ ವಿಧಾನ: ಚೆನ್ನಾಗಿ ಹಣ್ಣಾದ ಸ್ಟ್ರಾಬೆರ್ರಿ ಹಣ್ಣನ್ನು ತೊಳೆದು, ಎಲೆ, ತೊಟ್ಟು ಕತ್ತರಿಸಿ ತೆಗೆಯಿರಿ. ನಂತರ ಹಣ್ಣನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಸಕ್ಕರೆ, ಹಾಲು ಹಾಕಿ ಮತ್ತೊಮ್ಮೆ ತಿರುಗಿಸಿ. ಕುಡಿಯಲು ಕೊಡುವಾಗ ಸಣ್ಣಸಣ್ಣ ಸ್ಟ್ರಾಬೆರ್ರಿ ತುಂಡುಗಳನ್ನು ಹಾಗೆಯೇ ಸೇರಿಸಿ. ಈಗ ರುಚಿಯಾದ ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ಸಿದ್ಧ.