ಬೇಕಾಗುವ ಸಾಮಗ್ರಿ- ಹಣ್ಣಾದ ಸೌತೆಕಾಯಿ, ಬೆಲ್ಲ, ಏಲಕ್ಕಿ, ಕರಿಮೆಣಸಿನ ಪುಡಿ.
ಮಾಡುವ ವಿಧಾನ- ಹಣ್ಣಾಗಿ ಸಿಪ್ಪೆ ಹಳದಿ ಕೇಸರಿ ಬಣ್ಣಕ್ಕೆ ತಿರುಗಿದ ಸೌತೆ ಈ ಪಾನಕಕ್ಕೆ ಪ್ರಶಸ್ತವಾದುದು. ಸೌತೆಕಾಯಿಯನ್ನು ಸಿಪ್ಪೆ ತೆಗೆದು ತುರಿದಿಡಿ. ಇದಕ್ಕೆ ಬೆಲ್ಲವನ್ನು ರುಚಿಗೆ ತಕ್ಕಷ್ಟು ತುರಿದು ಸೇರಿಸಿ. ಐಸ್ ಕ್ರಶ್ ಮಾಡಿ ಕೊಂಚ ಸೇರಿಸಿ. ಏಲಕ್ಕಿ ಪುಡಿ, ಕರಿಮೆಣಸಿನ ಪುಡಿ ಸೇರಿಸಿ. ಫ್ರಿಡ್ಜ್‌ನಲ್ಲಿಟ್ಟು ತಂಪಾಗಿ ತಿನ್ನಲು ಉತ್ತಮ. ಬೇಸಗೆಯಲ್ಲಿ ಆರೋಗ್ಯಕ್ಕೂ ತಂಪು.