Article Sweets Recipes In Kannada %e0%b2%b8%e0%b3%8b%e0%b2%b0%e0%b3%86%e0%b2%95%e0%b2%be%e0%b2%af%e0%b2%bf %e0%b2%b8%e0%b2%bf%e0%b2%b9%e0%b2%bf%e0%b2%95%e0%b2%a1%e0%b3%81%e0%b2%ac%e0%b3%81 110043000087_1.htm

Daily Horoscope

Select Your Language

Notifications

webdunia
webdunia
webdunia
webdunia

ಸೋರೆಕಾಯಿ ಸಿಹಿಕಡುಬು

ಅಡುಗೆ
ಬೇಕಾಗುವ ಪದಾರ್ಥಗಳು: ಸೋರೆಕಾಯಿ 1, ಬೆಳ್ತಿಗೆ ಅಕ್ಕಿ 1 ಪಾವು, ತೆಂಗಿನಕಾಯಿ ಅರ್ಧ, ಕಾಲು ಕೆಜಿ ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬಾಳೆ ಎಲೆ.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಸೋರೆಕಾಯಿ ಚೆನ್ನಾಗಿ ತೊಳೆದು ತುರಿದಿಡಿ. ಅಕ್ಕಿ, ಬೆಲ್ಲ, ಏಲಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿ. ರುಬ್ಬಿದ ಹಿಟ್ಟಿಗೆ ಸೋರೆಕಾಯಿ ತುರಿ, ತೆಂಗಿನಕಾಯಿ ತುರಿ ಹಾಕಿ ಕಲಸಿ. ನಂತರ ಈ ಹಿಟ್ಟನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೆ ಕಾಯಿಸಬೇಕು. ಹಿಟ್ಟು ಗಟ್ಟಿಯಾದ ಮೇಲೆ ಬಾಡಿಸಿಟ್ಟ ಬಾಳೆಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಬೇಕು. ಬೆಂದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ತಿನ್ನಿ.

Share this Story:

Follow Webdunia kannada