ಬೇಕಾಗುವ ಸಾಮಗ್ರಿ: ಒಂದು ಕಪ್ ಸೂಜಿ, ಒಂದು ಕಪ್ ತುಪ್ಪ, ಎರಡು ಕಪ್ ಸಕ್ಕರೆ, ನಾಲ್ಕು ಕಪ್ ನೀರು, ಎರಡು ಏಲಕ್ಕಿ, ಕಾಲು ಕಪ್ ಒಣ ದ್ರಾಕ್ಷಿ, ಕಾಲು ಕಪ್ ಬಾದಾಮಿ.
ಮಾಡುವ ವಿಧಾನ: ಪಾತ್ರೆಯಲ್ಲಿ ಸ್ವಲ್ಪ ನೀರಿಗೆ ಸಕ್ಕರೆ ಹಾಕಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸೂಜಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಈ ಮಿಶ್ರಣಕ್ಕೆ ಸ್ವಲ್ಪ ಏಲಕ್ಕಿ, ಒಣ ದ್ರಾಕ್ಷಿ, ಬಾದಾಮಿ ಹಾಕಿ ಚೆನ್ನಾಗಿ ತಿರುವಿ. ಇದಕ್ಕೆ ಕುದಿಸಿದ ಸಕ್ಕರೆಯ ನೀರನ್ನು ಸೇರಿಸಿ. ಚೆನ್ನಾಗಿ ತಿರುವುತ್ತಲೇ ಇರಿ. ಇಲ್ಲವಾದರೆ ಅಲ್ಲಲ್ಲಿ ಗಂಟುಗಳಾಗುತ್ತವೆ. ಇದು ಸ್ವಲ್ಪ ಗಟ್ಟಿಯಾಗುತ್ತಾ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ. ಸೂಜಿ ಹಲ್ವಾ ರೆಡಿ.