ಬೇಕಾಗುವ ಸಾಮಗ್ರಿ- ಉದ್ದಿನ ಬೇಳೆ ಎರಡು ಕಪ್, ಸಕ್ಕರೆ ಒಂದು ಕಪ್, ತುಪ್ಪ ಒಂದು ಕಪ್.
ಮಾಡುವ ವಿಧಾನ- ಉದ್ದನ್ನು ತಿಳಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ರೋಸ್ಟ್ ಮಾಡಿ. ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿಡಿ. ರೋಸ್ಟ್ ಮಾಡಿದ ಉದ್ದನ್ನೂ ಚೆನ್ನಾಗಿ ಪುಡಿ ಮಾಡಿ. ಎರಡನ್ನು ಮಿಕ್ಸ್ ಮಾಡಿ. ಬೇಕಾದಷ್ಟು ತುಪ್ಪ ಬಳಸಿಕೊಂಡು ನಿಂಬೆ ಗಾತ್ರದ ಲಡ್ಡುಗಳ ಆಕಾರದ ಉಂಡೆ ಮಾಡಿ. ಸುನ್ನುಂದಾಳು ರೆಡಿ.