Article Sweets Recipes In Kannada %e0%b2%b8%e0%b2%bf%e0%b2%b9%e0%b2%bf%e0%b2%97%e0%b3%81%e0%b2%82%e0%b2%ac%e0%b2%b3 %e0%b2%b9%e0%b2%b2%e0%b3%8d%e0%b2%b5%e0%b2%be 109101600062_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಹಿಗುಂಬಳ ಹಲ್ವಾ

ಸಿಹಿಗುಂಬಳ ಹಲ್ವಾ
ಬೇಕಾಗುವ ಸಾಮಗ್ರಿ: ತುರಿದ ಸಿಹಿಗುಂಬಳ ಮೂರು ಕಪ್, ಸಕ್ಕರೆ ಅರ್ಧ ಕಪ್, ಹಾಲು ಮೂರು ಕಪ್, ಮೂರು ಚಮಚ ತುಪ್ಪ, ಚಿಟಿಕೆ ಏಲಕ್ಕಿ ಪುಡಿ, ಬಾದಾಮಿ ಸ್ವಲ್ಪ.
ಮಾಡುವ ವಿಧಾನ: ಒಲೆಯ ಮೇಲೆ ತುಪ್ಪ ಬಿಸಿ ಮಾಡಿ ತುರಿದ ಕುಂಬಳಕಾಯಿಯನ್ನು ಹಾಕಿ ತಿರುಗಿಸಿ. ಸುಮಾರು 5-10 ನಿಮಿಷಗಳಲ್ಲಿ ಕುಂಬಳದ ಬಣ್ಣ ಬದಲಾಗುತ್ತದೆ. ಬಣ್ಣ ಬದಲಾದ ತಕ್ಷಣ ಹಾಲು ಸೇರಿಸಿ. ಗಟ್ಟಿಗೊಳ್ಳಲು ಅರ್ಧ ಗಂಟೆ ಹಾಗೆಯೇ ತಿರುವುತ್ತಾ ಇರಿ. ನೀರಿನ ಅಂಶ ಆವಿಯಾಗುತ್ತಿದ್ದಂತೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ. ಇನ್ನೂ ಐದು- ಹತ್ತು ನಿಮಿಷ ತಿರುವುತ್ತಲೇ ಇರಿ. ಬಾದಾಮಿ ಸೇರಿಸಿ ಕೆಳಗಿಳಿಸಿ. ಸಿಹಿಗುಂಬಳ ಹಲ್ವಾ ರೆಡಿ.

Share this Story:

Follow Webdunia kannada