Article Sweets Recipes In Kannada %e0%b2%b8%e0%b2%bf%e0%b2%b9%e0%b2%bf %e0%b2%b8%e0%b2%b2%e0%b2%be%e0%b2%a1%e0%b3%8d 110061800090_1.htm

Select Your Language

Notifications

webdunia
webdunia
webdunia
webdunia

ಸಿಹಿ ಸಲಾಡ್

ಅಡುಗೆ
ಬೇಕಾಗುವ ಸಾಮಗ್ರಿ- ಬಾದಾಮಿ 100 ಗ್ರಾಂ, ಗೋಡಂಬಿ 100 ಗ್ರಾಂ, ಉತ್ತುತ್ತಿ 100 ಗ್ರಾಂ, 100 ಗ್ರಾಂ ಖರ್ಜೂರ, ಒಣಕೊಬ್ಬರಿ 100 ಗ್ರಾಂ, ಗಸಗಸೆ 100 ಗ್ರಾಂ, ಜೇನುತುಪ್ಪ 1 ಚಮಚ, ಅರ್ಧ ಲೀಟರ್ ಹಾಲು, ಅರ್ಧ ಕಪ್ ಸಕ್ಕರೆ, ಸ್ವಲ್ಪ ಬಿಸ್ಕೆಟ್ ಚೂರುಗಳು.

ಮಾಡುವ ವಿಧಾನ- ಬಾದಾಮಿ ಚೂರುಗಳು, ಗೋಡಂಬಿ ಚೂರು, ಉತ್ಪತ್ತಿ ಕಾಯಿಗಳು, ಒಣ ಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಆಗದಂತೆ ತರಿತರಿಯಾಗಿ ರುಬ್ಬಿ. ರುಬ್ಬುವಾಗ ನೀರು ಸೇರಿಸಬೇಡಿ. ನಂತರ ಖರ್ಜರದ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಈ ಪುಡಿಗೆ ಖರ್ಜೂರ ತುಂಡುಗಳನ್ನೂ, ಜೇನುತುಪ್ಪವನ್ನೂ ಹಾಕಿ ಮಿಕ್ಸ್ ಮಾಡಿ. ಒಲೆಯ ಉರಿ ಸಣ್ಣದಾಗಿಟ್ಟು ಪಾತ್ರೆಯೊಂದರಲ್ಲಿ ಹಾಲು ಹಾಕಿ ತಿರುವಿ. ಸಕ್ಕರೆ ಸೇರಿಸಿ. ರುಬ್ಬಿಕೊಂಡ ಪುಡಿಯನ್ನು ಕಾಯುತ್ತಿರುವ ಹಾಲಿಗೆ ಹಾಕಿ. ಅದಕ್ಕೆ ಬೇಕಾದಷ್ಟು ಬಿಸ್ಕೆಟ್ ಚೂರು ಸೇರಿಸಿ. ನಂತರ ಕೆಳದಿಳಿಸಿ. ಆರಿದ ನಂತರ ಫ್ರಿಡ್ಜ್‌ನಲ್ಲಿಟ್ಟು ತಿನ್ನಲು ಬಲು ರುಚಿ.

Share this Story:

Follow Webdunia kannada