ಬೇಕಾಗುವ ಸಾಮಗ್ರಿ- ಹಾಲು ಅರ್ಧ ಲೀಟರ್ ಪ್ಯಾಕೆಟ್, ಗುಲಾಬಿ ಎಸೆನ್ಸ್ ಕಾಲು ಟೀ ಚಮಚ, ಅಕ್ಕಿ ಒಂದು ಟೇಬಲ್ ಚಮಚ, ಸಕ್ಕರೆ ಮುಕ್ಕಾಲು ಕಪ್, ಗೋಡಂಬಿ, ಬಾದಾಮಿ ಸ್ವಲ್ಪ.
ಮಾಡುವ ವಿಧಾನ- ಅಕ್ಕಿಯನ್ನು ತೊಳೆದು ಎರಡು ಗಂಟೆ ನೆನೆಸಿಡಿ. ನೆನೆದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಾಲನ್ನು ಬಿಸಿ ಮಾಡಿ. ರುಬ್ಬಿದ ಅಕ್ಕಿಯನ್ನು ಚಿಕ್ಕ ಉರಿಯಲ್ಲಿ ಕೈಬಿಡದೆ ಬೇಯಿಸಿ. ಹತ್ತು ನಿಮಿಷವಾದಾಗ ಸಕ್ಕರೆ ಬೆರೆಸಿ. ಸಕ್ಕರೆ ಕರಗಿ ಕುದಿ ಬಂದಾಗ ಗುಲಾಬಿ ಎಸೆನ್ಸೆ ಸೇರಿಸಿ. ಗೋಡಂಬಿ ಬಾದಾಮಿಯ್ನನು ಸೇರಿಸಿ. ಫ್ರಿಡ್ಜಿನಲ್ಲಿಟ್ಟು ತಣಿಸಿ ತಿನ್ನಲು ಕೊಡಿ.