ಬೇಕಾಗುವ ಸಾಮಗ್ರಿ: 2 ಬಟ್ಟಲು ಅಕ್ಕಿ,1 ಬಟ್ಟಲು ಕಾಯಿತುರಿ,2 ಬಾಳೆಹಣ್ಣು, 1/2 ಬಟ್ಟಲು ಅವಲಕ್ಕಿ,2 ಬಟ್ಟಲು ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ ಮತ್ತು ತುಪ್ಪ.
ವಿಧಾನ: ಅಕ್ಕಿ ಮತ್ತು ಅವಲಕ್ಕಿ ಇವುಗಳನ್ನು 2 ಗಂಟೆ ನೆನೆಸಿ. ಕಾಯಿತುರಿ, ಬಾಳೆಹಣ್ಣು, ಏಲಕ್ಕಿ ಪುಡಿ ಜೊತೆ ರುಬ್ಬಿ. ನಂತರ ಬೆಲ್ಲವನ್ನೂ ಸೇರಿಸಿ ರುಬ್ಬಿಟ್ಟುಕೊಳ್ಳಿ. ಅರ್ಧ ಗಂಟೆ ಹಿಟ್ಟು ನೆನೆಯಲು ಬಿಡಿ. ಕಾದ ಪಡ್ಡಿನ ಹೆಂಚಿಗೆ ತುಪ್ಪವನ್ನು ಹಾಕಿ. ಬಟ್ಟಲುಗಳಲ್ಲಿ ಹಿಟ್ಟು ತುಂಬಿ ಎರಡೂ ಕಡೆ ಬೇಯಿಸಿ. ಜೇನುತುಪ್ಪದೊಡನೆ ಸವಿಯಲು ಕೊಡಿ.